ದೈವಪಾತ್ರಿಯಿಂದ ಅವಮಾನ ಆರೋಪ: ಮಹಿಳೆ ಆತ್ಮಹತ್ಯೆ

ಹೊಸದಿಲ್ಲಿ, ಮಾ. 2: ದೇವಾಲಯದ ಕಾರ್ಯಕ್ರಮದ ಸಂದರ್ಭ ದೈವಪಾತ್ರಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ.
ಕಳೆದ ವಾರ ಮನಲೂರು ದೇವಾಲಯದಲ್ಲಿ ಸಾರ್ವಜನಿಕ ಆಚರಣೆಯ ಸಂದರ್ಭ ದೈವಪಾತ್ರಿ ಉದ್ದೇಶಪೂರ್ವಕವಾಗಿ ಮಹಿಳೆಯೋರ್ವರ ಚಾರಿತ್ರ್ಯ ವಧೆ ಮಾಡಿದ್ದು, ಅಲ್ಲದೆ, ಸೇರಿದ್ದ ಸುಮಾರು 200 ಜನರ ಎದುರು ಕ್ಷಮೆ ಕೋರುವಂತೆ ಆದೇಶಿಸಿದ್ದ ಎಂದು ಆರೋಪಿಸಲಾಗಿದೆ.
ಈ ಘಟನೆಯಿಂದ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಿಳೆಗೆ ಎರಡು ಮಕ್ಕಳು ಇದ್ದಾರೆ. ‘ಆತ್ಮಹತ್ಯೆಗೆ ಕುಮ್ಮಕ್ಕು’ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯ ಸಹೋದರರ ಹಾಗೂ ಪತಿ ದೈವಪಾತ್ರಿ ವಿರುದ್ಧ ಅಂತಿಕ್ಕಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸ್ಥಳೀಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





