ಮಂಗಳೂರು ವಿವಿಯಲ್ಲಿ 'ಮ್ಯಾಗ್ನಂ-2020' ಉದ್ಘಾಟನೆ

ಕೊಣಾಜೆ: ನಾವು ಗುಣಮಟ್ಟದ ಶಿಕ್ಷಣದೊಂದಿಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜ್ಞಾನ ಶಕ್ತಿ, ಕೌಶಲ್ಯ, ಉತ್ತಮವಾದ ವರ್ತನೆ, ಮಾನವೀಯ ಮೌಲ್ಯ, ಪ್ರಾಮಾಣಿಕತೆ ಸೇರಿದಂತೆ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಆತ್ಮಶೋಧನೆಯೊಂದಿಗೆ ಮುನ್ನಡೆಯಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು. ಅವರು ಮಂಗಳೂರು ವಿವಿಯ ವಾಣಿಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯಲ್ಲಿ ನಡೆಯಲಿರುವ ಮ್ಯಾಗ್ನಂ-2020 ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ, ಅಂಕಗಳು ನಮ್ಮ ಜೊತೆ ಇದ್ದರೆ ಮಾತ್ರ ಜೀವನದ ಸವಾಲುಗಳನ್ನು ಎದುರಿಸಲು ಸಾಧ್ಯವಾಗದು. ಇದರೊಂದಿಗೆ ಇಂದಿನ ಆಧುನಿಕ ಕಾಲಘಟ್ಟಕ್ಕೆ ಪೂರಕವಾಗಿ ಜ್ಞಾನ ಕೌಶಲವನ್ನು ವೃದ್ಧಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯ ತಜ್ಞರಿಂದ, ಹಳೆ ವಿದ್ಯಾರ್ಥಿಗಳಿಂದ ಉಪನ್ಯಾಸಗಳನ್ನು ಏರ್ಪಡಿಸಲು ಯೋಜನೆ ರೂಪಿಸಲಾಗುವುದು. ಇಂತಹ ಸಮ್ಮೇಳನಗಳು ಹೊಸ ಅನುಭಗಳೊಂದಿಗೆ ನಮ್ಮ ಬದುಕಿಗೆ ಸ್ಪೂರ್ತಿ ನೀಡುತ್ತದೆ. ಇಂತಹ ಅವಕಾಶಗಳನ್ನು ಪ್ರತಿಯೊಬ್ಬರು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಪ್ತೊ.ಟಿ.ಎನ್.ಶ್ರೀಧರ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.
ಸಿಂಡಿಕೇಟ್ ಬ್ಯಾಂಕ್ ನ ಮಣಿಪಾಲದ ವಲಯ ಮ್ಯಾನೇಜರ್ ಬಾಸ್ಕರ ಹಂಧೆ, ಉದ್ಯಮಿ ಜಿ. ಗಿರಿಧರ್ ಪ್ರಭು, ಮೆಸ್ಕಾಂ ವಿಭಾಗದ ಅಧಿಕಾರಿ ಹರಿಶ್ಚಂದ್ರ ಬಿ, ಸಿಂಡಿಕೇಟ್ ಬ್ಯಾಂಕ್ ನ ಸಂಪತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಂಗಳೂರು ವಿವಿ. ವಾಣಿಜ್ಯ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ.ವೇದವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮ್ನೇಳನದ ಬಗ್ಗೆ ವಿವರಿಸಿದರು. ಪ್ರಾಧ್ಯಪಕರಾದ ಡಾ.ಪರಮೇಶ್ವರ್, ಡಾ.ಪ್ರೀತಿ ಕೀರ್ತಿ ಡಿಸೋಜ, ಕಾಮರ್ಸ್ ಅಸೋಸಿಯೇಷನ್ ನ ಸಂಯೋಜಕ ಜಯಪ್ರಶಾಂತ್, ಸಹ ಸಂಯೋಜಕರಾದ ಡಾ.ಭಾಗ್ಯಲಕ್ಷ್ಮೀ ಎಂ, ಅಸೋಶಿಯೇಷನ್ ನ ವಿದ್ಯಾರ್ಥಿ ಮುಖಂಡರಾದ ಶ್ರೀನಾಥ್, ಯಶಸ್ವಿನಿ, ಫಿಯೋನಾ ಡಿಕ್ರಾಸ್ತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಒಲಿವಿಯ ಕಾರ್ಯಕ್ರಮ ನಿರೂಪಿಸಿದರು.







