ಪಿಯು 'ಪ್ರಶ್ನೆ ಪತ್ರಿಕೆ'ಯ ಫೋಟೋ ವೈರಲ್ ಪ್ರಕರಣ: ವಿದ್ಯಾರ್ಥಿ ಸೇರಿ ಇಬ್ಬರು ಪೊಲೀಸ್ ವಶಕ್ಕೆ
ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಅಮಾನತು

ಸಾಂದರ್ಭಿಕ ಚಿತ್ರ
ವಿಜಯಪುರ, ಮಾ.4: ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದಾಗಲೇ ಪ್ರಶ್ನೆ ಪತ್ರಿಕೆಯ ಫೋಟೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಇಂಡಿ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪ್ರಶ್ನೆ ಪತ್ರಿಕೆ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟ ಆರೋಪದ ಮೇಲೆ ವಿದ್ಯಾರ್ಥಿ ಮುರುಘೇಂದ್ರ ಹಿರೇಮಠ(19) ಹಾಗೂ ಫೋಟೋ ತೆಗೆದ ಆರೋಪಿ ಬಾಗಪ್ಪ ಸಗರ(22) ನನ್ನು ವಶಕ್ಕೆ ಪಡೆಯಲಾಗಿದೆ.
ಇಂಡಿ ಪಟ್ಟಣದ ಖಾಸಗಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಇಂದು ನಡೆದ ಈ ಘಟನೆ ನಡೆದಿದೆ. ಪರೀಕ್ಷಾ ಕೇಂದ್ರದಲ್ಲಿದ್ದ ಪರೀಕ್ಷಾರ್ಥಿ ಮುರುಘೇಂದ್ರ ಹಿರೇಮಠ ಪ್ರಶ್ನೆ ಪತ್ರಿಕೆ ಹಿಡಿದು ಕಿಟಕಿಯಿಂದ ಪೊಟೋಗೆ ಅವಕಾಶ ಮಾಡಿಕೊಟ್ಟಿದ್ದ ಹಾಗೂ ಭಾಗಪ್ಪ ಸಗರ ಪೋಟೋ ಕ್ಲಿಕ್ಲಿಸಿದ್ದ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿ ಎಂ.ಡಿ. ನಾರಾಯಣಕರ ಅವರನ್ನು ಅಮಾನತು ಮಾಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
Next Story





