ಕೊರೋನವೈರಸ್ ಚಿಕಿತ್ಸೆಯಲ್ಲಿ ಸಂಧಿವಾತದ ಔಷಧಿ ಬಳಸಲು ಚೀನಾ ಅನುಮತಿ
ಬೀಜಿಂಗ್, ಮಾ. 4: ಗಂಭೀರ ಸ್ಥಿತಿಯಲ್ಲಿರುವ ಕೊರೋನವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಚೀನಾವು ರೋಶ್ ಹೋಲ್ಡಿಂಗ್ ಎಜಿ ಕಂಪೆನಿಯ ಸಂಧಿವಾತದ ಔಷಧವೊಂದನ್ನು ಬಳಸಲಿದೆ ಎಂದು ದೇಶದ ಆರೋಗ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸ್ವೀಡನ್‌ನ ಔಷಧಿ ತಯಾರಕ ಸಂಸ್ಥೆ ರೋಶ್ ಹೋಲ್ಡಿಂಗ್ ಎಜಿ ಕಂಪೆನಿಯು ‘ಆ್ಯಕ್ಟರ್ಮ’ ಎಂಬ ಮಾರುಕಟ್ಟೆ ಹೆಸರಿನಲ್ಲಿ ಮಾರಾಟ ಮಾಡುವ ‘ಟಾಸಿಲಿಝುಮಬ್’ ಔಷಧವನ್ನು ತೀವ್ರ ಶ್ವಾಸಕೋಶದ ಹಾನಿಗೆ ಒಳಗಾಗಿರುವ ರೋಗಿಗಳ ಚಿಕಿತ್ಸೆಯಲ್ಲಿ ಬಳಸಬಹುದಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಈ ಔಷಧವು ಕೊರೋನವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ಸಾಬೀತುಪಡಿಸುವ ಕ್ಲಿನಿಕಲ್ ಪರೀಕ್ಷೆ ಇನ್ನೂ ಆಗಿಲ್ಲ.
Next Story





