Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದಿಲ್ಲಿ ಹಿಂಸಾಚಾರಕ್ಕಾಗಿ ಹೊರಗಿನಿಂದ...

ದಿಲ್ಲಿ ಹಿಂಸಾಚಾರಕ್ಕಾಗಿ ಹೊರಗಿನಿಂದ ಸುಮಾರು 2,000 ಜನರನ್ನು ತರಲಾಗಿತ್ತು

ದಿಲ್ಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಆರೋಪ

ವಾರ್ತಾಭಾರತಿವಾರ್ತಾಭಾರತಿ4 March 2020 9:25 PM IST
share
ದಿಲ್ಲಿ ಹಿಂಸಾಚಾರಕ್ಕಾಗಿ ಹೊರಗಿನಿಂದ ಸುಮಾರು 2,000 ಜನರನ್ನು ತರಲಾಗಿತ್ತು

ಹೊಸದಿಲ್ಲಿ,ಮಾ.4: ಈಶಾನ್ಯ ದಿಲ್ಲಿಯಲ್ಲಿ ಹಿಂಸಾಚಾರವನ್ನು ನಡೆಸಲು ವ್ಯವಸ್ಥಿತ ಸಂಚೊಂದು ನಡೆದಿದ್ದು,ಸುಮಾರು 1,500-2,000 ಜನರನ್ನು ಹೊರಗಿನಿಂದ ತರಲಾಗಿತ್ತು ಮತ್ತು ದಂಗೆಗೆ ಮುನ್ನ ಸುಮಾರು 24 ಗಂಟೆಗಳ ಕಾಲ ಅವರಿಗೆ ಸ್ಥಳೀಯ ಕೆಲವು ಶಾಲೆಗಳಲ್ಲಿ ವಸತಿಯನ್ನು ಕಲ್ಪಿಸಲಾಗಿತ್ತು ಎಂದು ದಿಲ್ಲಿ ಅಲ್ಪಸಂಖ್ಯಾತರ ಆಯೋಗ (ಡಿಸಿಎಂ)ದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಅವರು ಆರೋಪಿಸಿ ದ್ದಾರೆ. ಖಾನ್ ನೇತೃತ್ವದಲ್ಲಿ ಡಿಸಿಎಂ ತಂಡ ಮಾ.2ರಂದು ಹಿಂಸಾಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತ್ತು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಖಾನ್,ಇದೊಂದು ಯೋಜಿತ ಹಿಂಸಾಚಾರ ವಾಗಿತ್ತು ಎನ್ನುವುದು ಡಿಸಿಎಂ ತಂಡದ ಭೇಟಿ ವೇಳೆ ತಿಳಿದುಬಂದಿದೆ. ಇದಕ್ಕಾಗಿ ಹೊರಗಿನಿಂದ ಜನರನ್ನು ಕರೆಸಲಾಗಿತ್ತು. ಈ ಜನರು ಎಲ್ಲಿಂದ ಬಂದಿದ್ದರು ಎನ್ನುವುದನ್ನು ಪತ್ತೆ ಹಚ್ಚುವುದು ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳ ಕೆಲಸವಾಗಿದೆ. ಹಿಂಸಾಚಾರದಲ್ಲಿ ಭಾಗಿಯಾಗಿದ್ದ,ಮುಖಕ್ಕೆ ಮುಸುಕು ಅಥವಾ ಹೆಲ್ಮೆಟ್‌ಗಳನ್ನು ಹಾಕಿಕೊಂಡಿದ್ದ ಜನರ ಚಿತ್ರಗಳನ್ನು ತಂಡವು ಸಂಗ್ರಹಿಸಿದೆ. ಈ ವಿಷಯಗಳನ್ನು ಪೀಡಿತ ಪ್ರದೇಶಕ್ಕೆ ತಂಡದ ಭೇಟಿಯ ಕುರಿತು ವರದಿಯಲ್ಲಿ ಕಾಣಿಸಲಾಗುವುದು,ಆದರೆ ಪ್ರಮುಖ ಸತ್ಯಶೋಧನಾ ವರದಿ ನಂತರ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು.

ಹಿಂಸಾಚಾರ ಆರಂಭಗೊಂಡಾಗಿನಿಂದಲೂ ಆಯೋಗವು ವಿಷಯನ್ನು ಪ್ರಸ್ತಾಪಿಸುತ್ತಲೇ ಇತ್ತು. ವ್ಯಕ್ತಿಗತ ಪ್ರಕರಣಗಳೂ ಸೇರಿದಂತೆ ನೋಟಿಸ್‌ಗಳು ಮತ್ತು ಆದೇಶಗಳನ್ನು ಹೊರಡಿಸುತ್ತಿತ್ತು. ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸುವಂತೆ ಆಯೋಗವು ದಿಲ್ಲಿ ಪೊಲೀಸರನ್ನು ಆದೇಶಿಸಿದ ಬಳಿಕ ಹೆಚ್ಚಿನ ಸ್ಥಳಗಳಲ್ಲಿ ಕರ್ಫ್ಯೂ ಹೇರಲಾಗಿತ್ತು ಎಂದರು.

ಪೊಲೀಸರ ಅನುಪಸ್ಥಿತಿಯು ದಂಗೆಕೋರರನ್ನು ಉತ್ತೇಜಿಸಿತ್ತು ಎಂಬ ಜನರ ದೂರಿನ ಕುರಿತಂತೆ ಅವರು,ಅತ್ಯಂತ ಹೆಚ್ಚಿನ ಹಿಂಸಾಚಾರ ನಡೆದಿದ್ದ ಮೊದಲ ಎರಡು ದಿನಗಳು ಪೊಲೀಸರ ಉಪಸ್ಥಿತಿ ಕನಿಷ್ಠವಾಗಿತ್ತು ಎನ್ನುವುದು ಈಗ ಸಾಬೀತಾಗಿದೆ. ತಾವು ಜನರನ್ನು ರಕ್ಷಿಸಿರುವುದಾಗಿ ದಿಲ್ಲಿ ಪೊಲೀಸರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು ಯಾವುದನ್ನೂ ರಕ್ಷಿಸಲಿಲ್ಲ. ಅವರು ಜನರನ್ನು ಕೊಲ್ಲಲು,ಆಸ್ತಿಗಳಿಗೆ ನಾಶವನ್ನುಂಟು ಮಾಡಲು, ಮನೆಗಳು-ಅಂಗಡಿಗಳಿಗೆ ಬೆಂಕಿ ಹಚ್ಚಲು ದಂಗೆಕೋರರಿಗೆ ಅವಕಾಶ ನೀಡಿದ್ದರು ಎಂದು ಆರೋಪಿಸಿದರು. ಫೆ.24 ಮತ್ತು 25ರ ನಂತರವೇ ಪೊಲೀಸರು ಸಕ್ರಿಯರಾಗಿದ್ದರು. 26ರಂದು ಕಡಿಮೆಯಾಗಿದ್ದ ಹಿಂಸಾಚಾರ 27ರಂದು ಅಂತ್ಯಗೊಂಡಿತ್ತು. ಪೊಲೀಸರು  ತಮ್ಮ  ನಡವಳಿಕೆಗೆ ಉತ್ತರಿಸಬೇಕಿದೆ. ಇದಲ್ಲಿ ಎರಡು ಮಾತೇ ಇಲ್ಲ ಎಂದರು.

ಭಾರೀ ಹಿಂಸಾಚಾರಕ್ಕೆ ಬೆದರಿ ಹೆಚ್ಚಿನವರು ಮನೆಗಳನ್ನು ತೊರೆದು ಸಂಬಂಧಿಗಳ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ ಅಥವಾ ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಕೆಲವರು ಸರಕಾರಿ ಅಥವಾ ಖಾಸಗಿ ಶಿಬಿರಗಳಲ್ಲಿದ್ದಾರೆ. ಹಿಂಸಾಗ್ರಸ್ತ ಪ್ರದೇಶಗಳಿಗೆ ಸಾಕಷ್ಟು ಆಹಾರ ಸಾಮಗ್ರಿಗಳನ್ನು ತಲುಪಿಸಲಾಗಿದೆ. ಪ್ರಶ್ನೆ ಈಗ ಆಹಾರದ್ದಲ್ಲ. ಸಂತ್ರಸ್ತರಿಗೆ ಈಗ ತಮ್ಮ ಮನೆಗಳನ್ನು ಮತ್ತು ಬದುಕುಗಳನ್ನು ಕಟ್ಟಿಕೊಳ್ಳಲು ಸಾಕಷ್ಟು ಪರಿಹಾರದ ಅಗತ್ಯವಿದೆ ಎಂದರು.

ಜನರಿಗೆ ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡಲಾಗುತ್ತಿಲ್ಲ ಎಂಬ ಆರೋಪದ ಕುರಿತಂತೆ ಖಾನ್,ಅವರನ್ನು ಯಾರೂ ತಡೆಯುತ್ತಿಲ್ಲ,ಆದರೆ ಸಮಸ್ಯೆಯೆಂದರೆ ಹೆಚ್ಚಿನ ಮನೆಗಳು ಹಾನಿಗೀಡಾಗಿವೆ ಅಥವಾ ಸುಟ್ಟುಹೋಗಿವೆ. ಕೈಯಲ್ಲಿ ಹಣವೂ ಇಲ್ಲದೇ ಅವರು ಅಲ್ಲೇನು ಮಾಡುತ್ತಾರೆ? ಸುರಕ್ಷತೆಯ ಭಾವನೆ ಉಂಟಾದರೆ ಮಾತ್ರ ಜನರು ತಮ್ಮ ಮನೆಗಳಿಗೆ ಮರಳಬಲ್ಲರು. ತಮ್ಮ ಮನೆಗಳನ್ನು ದುರಸ್ತಿ ಮಾಡಲು ಹಣಕಾಸಿನ ಅಗತ್ಯವೂ ಅವರಿಗೆ ಇದೆ. ಸರಕಾರವು ಪ್ರಕಟಿಸಿರುವ ಪರಿಹಾರ ಏನೇನೂ ಸಾಲದು. ಅದನ್ನು ಹೆಚ್ಚಿಸುವಂತೆ ಆಯೋಗವು ಕೋರಿಕೊಂಡಿದೆ ಎಂದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X