ಐದು ವರ್ಷಗಳಲ್ಲಿ ಪ್ರಧಾನಿಯ ವಿದೇಶ ಪ್ರವಾಸಗಳಿಗೆ 446.52 ಕೋ.ರೂ.ವೆಚ್ಚ: ಸರಕಾರದ ಮಾಹಿತಿ

ಹೊಸದಿಲ್ಲಿ,ಮಾ.4: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳಿಗಾಗಿ 446.52 ಕೋ.ರೂ.ವೆಚ್ಚವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಬುಧವಾರ ತಿಳಿಸಿದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಮುರಳೀಧರನ್ ಅವರು,ಇದರಲ್ಲಿ ಬಾಡಿಗೆ ವಿಮಾನಗಳ ವೆಚ್ಚಗಳೂ ಸೇರಿವೆ ಎಂದರು.
ಈ ಬಗ್ಗೆ ವಿವರಗಳನ್ನು ನೀಡಿದ ಅವರು,2015-16ರಲ್ಲಿ121.85 ಕೋ.ರೂ., 2016-17ರಲ್ಲಿ 78.52 ಕೋ.ರೂ.,2017-18ರಲ್ಲಿ 99.90 ಕೋ.ರೂ.,2018-19ರಲ್ಲಿ 100.02 ಕೋ.ರೂ ಮತ್ತು 2019-20ರಲ್ಲಿ 46.23 ಕೋ.ರೂ.ಗಳು ವೆಚ್ಚವಾಗಿವೆ ಎಂದರು.
Next Story





