ಪೇಟಿಎಂ ಉದ್ಯೋಗಿಗೆ ಕೊರೊನ ವೈರಸ್: ಭಾರತದಲ್ಲಿ 29ನೆ ಪ್ರಕರಣ

ಹೊಸದಿಲ್ಲಿ: ಪೇಟಿಎಂ ಉದ್ಯೋಗಿಯೊಬ್ಬರಲ್ಲಿ ಕೊರೊನಾ ವೈರಸ್ ದೃಢಪಟ್ಟಿದ್ದು, ಸಂಸ್ಥೆಯು ಗುರ್ಗಾಂವ್ ನಲ್ಲಿರುವ ಕಚೇರಿಯನ್ನು 2 ದಿನಗಳ ಕಾಲ ಮುಚ್ಚಲಿದೆ. ಭಾರತದಲ್ಲಿ ದೃಢಪಟ್ಟ 29ನೆ ಕೊರೊನಾವೈರಸ್ ಪ್ರಕರಣ ಇದಾಗಿದೆ.
ಕೊರೊನಾವೈರಸ್ ಪೀಡಿತ ಉದ್ಯೋಗಿ ಇತ್ತೀಚೆಗಷ್ಟೇ ಇಟಲಿಯಿಂದ ವಾಪಸ್ ಬಂದಿದ್ದ ಎಂದು ಪೇಟಿಎಂ ಪ್ರಕಟನೆಯಲ್ಲಿ ತಿಳಿಸಿದೆ. ಮುಂದಿನ 2 ದಿನಗಳ ಕಾಲ ಮನೆಯಲ್ಲೇ ಕೆಲಸ ಮಾಡುವಂತೆ ಅದು ತನ್ನ ಉದ್ಯೋಗಿಗಳಿಗೆ ಸೂಚಿಸಿದೆ.
ಭಾರತದಲ್ಲಿ ವೈರಸ್ ಸೋಂಕಿತ 29 ಮಂದಿಯಲ್ಲಿ 15 ಮಂದಿ ಇಟಲಿ ಪ್ರವಾಸಿಗರು ಸೇರಿದ್ದು, ಇವರೊಂದಿಗೆ ಪ್ರಯಾಣಿಸಿದ್ದ ಭಾರತೀಯ ಚಾಲಕ ಕೂಡ ವೈರಸ್ ಗೆ ತುತ್ತಾಗಿದ್ದಾನೆ. ಈಗಾಗಲೇ 5 ಲಕ್ಷ ಜನರಿಗೆ ಕೊರೊನಾವೈರಸ್ ತಪಾಸಣೆ ನಡೆಸಲಾಗಿದೆ.
Next Story





