ಮಾಜಿ ಶಾಸಕ ಕೃಷ್ಣಾಶೆಟ್ಟಿಯವರ ಪತ್ನಿ ನಿಧನ
ಮಂಗಳೂರು, ಮಾ.4: ಮಂಗಳೂರು ವಿಧಾನಸಭಾ ಕ್ಷೇತ್ರದ(ಉಳ್ಳಾಲ) ಶಾಸಕರಾಗಿದ್ದ ಕೃಷ್ಣಾಶೆಟ್ಟಿಯವರ ಪತ್ನಿ ಲಲಿತಾ (91) ಕಾವೂರಿನ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಸಂಜೆ ನಿಧನರಾದರು.
ಮೃತರು ಮೂವರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಕಾವೂರಿನಲ್ಲಿ ಮಾ.5ರಂದು (ಗುರುವಾರ) ಬೆಳಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಂತಾಪ: ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಹಿರಿಯ ಕಮ್ಯೂನಿಸ್ಟ್ ನೇತಾರ ಹಾಗೂ ಕೃಷ್ಣಾಶೆಟ್ಟಿಯವರ ಒಡನಾಡಿ ಕೆ.ಆರ್.ಶ್ರೀಯಾನ್, ಯು.ಬಿ. ಲೋಕಯ್ಯ ಸಂತಾಪ ಸೂಚಿಸಿದ್ದಾರೆ.
Next Story





