Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು ನಗರಸಭೆ: 67.55 ಲಕ್ಷ ರೂ....

ಪುತ್ತೂರು ನಗರಸಭೆ: 67.55 ಲಕ್ಷ ರೂ. ಮಿಗತೆ ಬಜೆಟ್ ಮಂಡನೆ

ವಾರ್ತಾಭಾರತಿವಾರ್ತಾಭಾರತಿ4 March 2020 11:16 PM IST
share
ಪುತ್ತೂರು ನಗರಸಭೆ: 67.55 ಲಕ್ಷ ರೂ. ಮಿಗತೆ ಬಜೆಟ್ ಮಂಡನೆ

ಪುತ್ತೂರು: ನಗರಸಭೆಯ ಆಡಳಿತಾಧಿಕಾರಿ ಅವರ ಅನುಮೋದನೆಯೊಂದಿಗೆ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ.ಶೆಟ್ಟಿ 2020-21 ಸಾಲಿನ ನಗರಸಭೆಯ ರೂ.46.11 ಕೋಟಿಯ ಮುಂಗಡ ಪತ್ರವನ್ನು ಬುಧವಾರ ನಗರಸಭಾ ಸಭಾಂಗಣದಲ್ಲಿ ಮಂಡಿಸಿದರು. ಮುಂಗಡ ಪತ್ರದಲ್ಲಿ ರೂ.67.55 ಲಕ್ಷ ಮಿಗತೆಯನ್ನು ನಿರೀಕ್ಷಿಸಲಾಗಿದೆ.

ವಿವರಗಳು:

2020-21 ಸಾಲಿನಲ್ಲಿ ನಿರೀಕ್ಷಿತ ಸಂಪನ್ಮೂಲಗಳು ಈ ರೀತಿ ಇವೆ. ಆರಂಭಿಕ ಶಿಲ್ಕು ರೂ.7.47 ಕೋಟಿ, ಸ್ವಂತ ಆದಾಯ ರೂ.12.46 ಕೋಟಿ, ವೇತನ ಅನುದಾನ ಮತ್ತು ವಿದ್ಯುತ್ ಅನುದಾನ ರಾಜ್ಯ ಹಣಕಾಸು ಮುಕ್ತ ನಿಧಿ ಅನುದಾನ ಹಾಗೂ ಇತರ ಅನುದಾನಗಳು ರೂ. 11.09 ಕೋಟಿ, ರಾಜ್ಯ ಮತ್ತು ಕೇಂದ್ರ ಸರ್ಕಾರ ಅನುದಾನ ರೂ.7.35 ಕೋಟಿ, ಇತರ ಹೊಂದಾಣಿಕೆ ಮೊತ್ತ ರೂ. 4.65 ಕೋಟಿ. ಒಟ್ಟು ರೂ.46.78 ಕೋಟಿ.

ನಿರೀಕ್ಷಿತ ಆದಾಯ:

ಪುತ್ತೂರು ನಗರಸಭೆಗೆ 2020-21 ಸಾಲಿನಲ್ಲಿ ನಿರೀಕ್ಷಿಸಲಾದ ಒಟ್ಟು ಸ್ವಂತ ಆದಾಯಗಳಲ್ಲಿ ಕೆಲವೊಂದು ಪ್ರಮುಖ ಆದಾಯಗಳ ವಿವರ ಈ ರೀತಿ ಇದೆ. ಆಸ್ತಿ ತೆರಿಗೆ ರೂ.4.72 ಕೋಟಿ, ನೀರಿನ ಶುಲ್ಕ ರೂ.3.25 ಕೋಟಿ, ನೀರಿನ ಸಂಪರ್ಕ ಶುಲ್ಕ ರೂ 15 ಲಕ್ಷ, ಕಟ್ಟಡ ಪರವಾನಿಗೆ ಶುಲ್ಕ ರೂ.40 ಲಕ್ಷ, ಅಭಿವೃದ್ಧಿ ಶುಲ್ಕ ರೂ.40 ಲಕ್ಷ, ಉದ್ಯಮ ಪರವಾನಿಗೆ ಶುಲ್ಕ ರೂ.40 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಶುಲ್ಕ ರೂ.85 ಲಕ್ಷ, ವಾಣಿಜ್ಯ ಸಂಕೀರ್ಣದ ಬಾಡಿಗೆ ರೂ.40 ಲಕ್ಷ, ಮಾರುಕಟ್ಟೆ ಮತ್ತು ನೆಲ ಬಾಡಿಗೆಯಿಂದ ರೂ. 36.50 ಲಕ್ಷ, ಪರಿಕರ ಸಂಗ್ರಹಣೆ ಶುಲ್ಕದಿಂದ ರೂ.10 ಲಕ್ಷ, ಖಾತೆ ಬದಲಾವಣೆ, ಇತರ ಬಾಬ್ತುಗಳಿಂದ ರೂ.25 ಲಕ್ಷ , ದಂಡಗಳಿಂದ ರೂ.60 ಲಕ್ಷ , ಪುರಭವನ ಬಾಡಿಗೆಯಿಂದ ರೂ. 5 ಲಕ್ಷ, ಜಾಹೀರಾತು ಶುಲ್ಕಗಳಿಂದ ರೂ.6 ಲಕ್ಷ ಆದಾಯವನ್ನು ನಿರೀಕ್ಷಿಸಲಾಗಿದೆ.

ಖರ್ಚು- ವೆಚ್ಚಗಳು:

ರಸ್ತೆ ಮತ್ತು ನಿರ್ಮಾಣಕ್ಕಾಗಿ ರೂ.8 ಕೋಟಿ, ಚರಂಡಿ ನಿರ್ಮಾಣ ರೂ.1.50 ಕೋಟಿ, ನೀರು ಸರಬಾರಜು ವ್ಯವಸ್ಥೆಗೆ ರೂ.5.10 ಕೋಟಿ, ಭೂಮಿ ಖರೀದಿಗೆ ರೂ.75 ಲಕ್ಷ, ಸರ್ಕಲ್ ಮತ್ತು ಸ್ಥಿರಾಸ್ತಿಗಳಿಗೆ ರೂ. 70 ಲಕ್ಷ, ಕಚೇರಿ ಸಲಕರಣೆಗಳಿಗಾಗಿ ರೂ.10 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕಾಗಿ ರೂ.30 ಲಕ್ಷ, ಪೀಠೋಪಕರಣ ಖರೀದಿಗೆ ರೂ.15 ಲಕ್ಷ, ಮೋರಿ ನಿರ್ಮಾಣಕ್ಕಾಗಿ ರೂ.25 ಲಕ್ಷ, ಚರಂಡಿ ನಿರ್ಮಾಣಕ್ಕಾಗಿ ರೂ.50 ಲಕ್ಷ, ಉದ್ಯಾನವನ ನಿರ್ಮಾಣಕ್ಕಾಗಿ ರೂ.60 ಲಕ್ಷ, ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ.2 ಕೋಟಿ, ಘನತ್ಯಾಜ್ ಘಟಕ ನಿರ್ಮಾಣಕ್ಕಾಗಿ ರೂ.2 ಕೋಟಿ, ಹೊಸ ವಾಹನ ಖರೀದಿಗಾಗಿ ರೂ.1.40 ಕೋಟಿ, ಪರಿಶಿಷ್ಠ ಜಾತಿ - ಪಂಗಡಗಳಿಗಾಗಿ ರೂ.93.96 ಲಕ್ಷ, ಬಿ.ಪಿ.ಎಲ್ ಕುಟುಂಬಗಳಿಗಾಗಿ ರೂ.28.26 ಲಕ್ಷ, ಭಿನ್ನ ಸಾಮಾಥ್ರ್ಯದ ಫಲಾನುಭವಿಗಳಿಗಾUಗಿ ರೂ.89.49 ಲಕ್ಷ, ಗಣಕಯಂತ್ರ ಮತ್ತು ಇತರ ಯಂತ್ರಗಳ ಖರೀದಿಗೆ ರೂ.15 ಲಕ್ಷ , ದಾರಿ ದೀಪ ವ್ಯವಸ್ಥೆಗೆ ರೂ.90 ಲಕ್ಷ, ನೀರು ಸರಬರಾಜು ಹೊರಗುತ್ತಿಗೆಗೆ ರೂ.60 ಲಕ್ಷ, ಸಿಬ್ಬಂದಿ ವೇತನಕ್ಕಾಗಿ ರೂ.2.58 ಕೋಟಿ,

ಮೂಲಭೂತ ಸೌಕರ್ಯ:

ನಗರಸಭೆಗೆ 2019-20 ನೇ ಸಾಲಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ರೂ.4 ಕೋಟಿ ಇಕೆಯಾಗಿದೆ. ರೂ.2 ಕೋಟಿ ವೆಚ್ಚದಲ್ಲಿ ಮತ್ತು ರೂ.2 ಕೋಟಿಯನ್ನು ನಗರಸಭೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಕಾದಿರಿಸಲಾಗಿದೆ. ನಗರೋತ್ಥಾನ ಯೋಜನೆಯಲ್ಲಿ ರೂ.25 ಕೋಟಿ ಹಂಚಿಕೆಯಾಗಿದ್ದು, ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ  ಹಾಗೂ ನಗರಸಭೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ರೂ. 1 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ಸಂಪೂರ್ಣ ಸ್ವಚ್ಛತೆಯ ಯೋಜನೆಗಾಗಿ ಪೌರಕಾರ್ಮಿಕರ ನೇಮಕವಾಗಿದ್ದು, 10 ಬೊಲೆರೊ ವಾಹನಗಳು ಹಾಗೂ 2 ಟಿಪ್ಪರ್ ವಾಹನಗಳನ್ನು ಖರೀದಿಸಲು ಬಜೆಟ್‍ನಲ್ಲಿ ನಿಗದಿಪಡಿಸಲಾಗಿದೆ.

ಈ ಸಂದರ್ಭ ಮುಖ್ಯ ಲೆಕ್ಕಾಧಿಕಾರಿ ಸಿ.ಆರ್.ದೇವಾಡಿಗ, ಕಂದಾಯ ಅಧಿಕಾರಿ ರಾಮಯ್ಯ ಗೌಡ, ಪರಿಸರ ಎಂಜಿನಿಯರ್ ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X