ಮಂಗಳೂರು: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಮಂಗಳೂರು, ಮಾ.4: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಪಂ ಗ್ರಂಥಾಲಯದಲ್ಲಿ ಖಾಲಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಬಡಗಕಜೆಕಾರು ಗ್ರಾಪಂ ಗ್ರಂಥಾಲಯದಲ್ಲಿ ಖಾಲಿ ಇವರು ಮೇಲ್ವಿಚಾರಕ ಹುದ್ದೆಗೆ ಏಳು ಸಾವಿರ ರೂ. ಸಂಭಾವನೆ ಆಧಾರದ ಮೇಲೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಎಸೆಸೆಲ್ಸಿ ಪಾಸಾದ ಹಾಗೂ ಅದೇ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮೇಲ್ವಿಚಾರಕರ ಸ್ಥಾನವು ಸಾಮಾನ್ಯ ಅರ್ಹತೆ (ಗ್ರಾಮೀಣ ಅಭ್ಯರ್ಥಿ) ಮೀಸಲಾಗಿದೆ. ಭರ್ತಿ ಮಾಡಿದ ಅರ್ಜಿಯ ಜೊತೆಗೆ ಇತರ ದೃಢೀಕೃತ ದಾಖಲೆಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸಲ್ಲಿಸಲು ಎಪ್ರಿಲ್ 6 ಕೊನೆಯ ದಿನಾಂಕವಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0824- 2441905 ಮತ್ತು ಗ್ರಾಮ ಪಂಚಾಯತ್ ಅಥವಾ ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story





