ಜಾತಿ ಪದ್ಧತಿ, ಮನುಸ್ಮೃತಿಯಿಂದ ಒಂದು ವರ್ಗದ ಜನರಿಗೆ ಶೋಷಣೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು, ಮಾ.4: ಕೆಲವರಿಗೆ ಕನಸನ್ನು ಕಾಣಲು ಅವಕಾಶವೇ ಚಾತುರ್ವರ್ಣ ಪದ್ದತಿಯಲ್ಲಿ ಇರಲಿಲ್ಲ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಬುಧವಾರ ಮಧ್ಯಾಹ್ನ ಭೋಜನ ವಿರಾಮದ ನಂತರ ವಿಧಾನಸಭೆಯಲ್ಲಿ ಭಾರತ ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಅವರು, ಜಾತಿ ಪದ್ದತಿ ಮತ್ತು ಮನುಸ್ಮೃತಿಯಿಂದ ಒಂದು ವರ್ಗದ ಜನರು ಶೋಷಣೆಯನ್ನು ಅನುಭವಿಸಿದರು ಎಂದರು.
ಮನುಸ್ಮೃತಿ ಹಾಗೂ ಚಾತುರ್ವರ್ಣ ಪದ್ದತಿಯ ಪ್ರಕಾರ ಬ್ರಾಹ್ಮಣರು ಬ್ರಹ್ಮನ ಮುಖದಿಂದ ಜನ್ಮ ಪಡೆದವರು, ಭುಜದಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಪಾದದಿಂದ ಶೂದ್ರರು ಜನ್ಮಪಡೆದರು. ಆದರೆ, ಅದಕ್ಕಿಂತ ಕೀಳು ವರ್ಗದವರನ್ನು ಮಲ ಹೊರಲಷ್ಟೇ ಸೀಮಿತಗೊಳಿಸಿದರು. ಜಾತಿಯ ಹೆಸರಿನಲ್ಲಿ ಕಟ್ಟಲಾಗಿದ್ದ ಈ ಗೋಡೆಯನ್ನು ಸಂವಿಧಾನದ ಮೂಲಕ ಒಡೆದು ಹಾಕುವ ಪ್ರಯತ್ನವನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮಾಡಿದರು ಎಂದು ನುಡಿದರು.
Next Story





