ಮಹಿಳಾ ವಿಶ್ವಕಪ್: ಸೆಮಿ ಫೈನಲ್ ಆಡದೇ ಮೊದಲ ಬಾರಿ ಫೈನಲ್ ತಲುಪಿದ ಭಾರತ

ಸಿಡ್ನಿ, ಮಾ.5: ಭಾರೀ ಮಳೆಯಿಂದಾಗಿ ಭಾರತ-ಇಂಗ್ಲೆಂಡ್ ಮಹಿಳಾ ತಂಡದ ಮಧ್ಯೆ ಗುರುವಾರ ನಡೆಯಬೇಕಾಗಿದ್ದ ವಿಶ್ವಕಪ್‌ನ ಮೊದಲ ಸೆಮಿ ಫೈನಲ್ ಪಂದ್ಯ ಒಂದು ಎಸೆತ ಕಾಣದೇ ರದ್ದಾಗಿದೆ. ಗ್ರೂಪ್ ಹಂತದಲ್ಲಿ ಇಂಗ್ಲೆಂಡ್‌ಗಿಂತ ಹೆಚ್ಚು ಅಂಕ ಗಳಿಸಿದ್ದ ಭಾರತ ಸೆಮಿ ಫೈನಲ್ ಆಡದಯೇ ಇದೇ ಮೊದಲ ಬಾರಿ ಫೈನಲ್‌ಗೆ ಪ್ರವೇಶ ಗಿಟ್ಟಿಸಿಕೊಂಡಿದೆ.
ಗ್ರೂಪ್ ಹಂತದಲ್ಲಿ ಭಾರತ 8 ಅಂಕ ಗಳಿಸಿದ್ದರೆ, ಇಂಗ್ಲೆಂಡ್ ಆರು ಅಂಕ ಗಳಿಸಿತ್ತು. ವಿಶ್ವಕಪ್ ಈ ರೀತಿ ಅಂತ್ಯವಾಗಿದ್ದಕ್ಕೆ ಬೇಸರವಾಗಿದೆ. ಮೀಸಲು ದಿನ ನಿಗದಿಪಡಿಸದಿರುವುದು ಇಂತಹ ಪರಿಸ್ಥಿತಿಗೆ ಕಾರಣವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗ್ರೂಪ್ ಹಂತದಲ್ಲಿ ಸೋತಿರುವುದು ನಮಗೆ ದುಬಾರಿ ಆಯಿತು ಎಂದು ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಪ್ರತಿಕ್ರಿಯಿಸಿದರು.
ದುರದೃಷ್ಟವಶಾತ್ ನಾವು ಪಂದ್ಯ ಆಡಿಲ್ಲ. ಕೆಲವೊಂದು ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ಭವಿಷ್ಯದಲ್ಲಿ ಮೀಸಲು ದಿನ ನಿಗದಿಪಡಿಸುವುದು ಉತ್ತಮ ಯೋಚನೆ ಯಾಗಿದೆ ಎಂದು ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೇಳಿದ್ದಾರೆ.
Next Story





