ರಾಜ್ಯ ಬಜೆಟ್ 2020-21 ಹೈಲೈಟ್ಸ್
ನೆರೆ ಪರಿಹಾರಕ್ಕೆ ಆದ್ಯತೆ: ಯಡಿಯೂರಪ್ಪ

►ಸದನ ಮುಂದೂಡಿಕೆ: ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡನೆ ನಂತರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಶುಕ್ರವಾರ ಬೆಳಗ್ಗೆ 10:30ಕ್ಕೆ ಮುಂದೂಡಿದರು.
►ರಾಜ್ಯವ್ಯಾಪಿ ಸುರಕ್ಷಾ ಆ್ಯಪ್ ವಿಸ್ತರಣೆಗೆ ಕ್ರಮ: ಬೆಂಗಳೂರು ನಗರದ 2 ಲಕ್ಷಕ್ಕೂ ಅಧಿಕ ಮಹಿಳೆಯರು ಸುರಕ್ಷಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಸೇವೆಯನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ. ಮಹಿಳೆಯರಿಗೆ ತುರ್ತು ಸ್ಪಂದನಾ ವಾಹನಗಳ ಮೂಲಕ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ
►ಸುಧಾಮೂರ್ತಿ ನೇತೃತ್ವದಲ್ಲಿ ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆ ಸ್ಥಾಪನೆ.
►ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿಗೆ 500 ಕೋ.ರೂ., ಪ್ರವಾಸಿಗರ ಆಕರ್ಷಣೆಗೆ 100 ಕೋ.ರೂ. ಅನುದಾನ.
► ಹಿರಿಯರಿಗೆ ಪ್ರವಾಸ ಭಾಗ್ಯ: ರಾಜ್ಯ ಪ್ರವಾಸೋದ್ಯಮ ನಿಗಮ, ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಸಹಯೋಗದಲ್ಲಿ 60 ವರ್ಷ ಮೀರಿದ ಬಡ ಫಲಾನುಭವಿಗಳಿಗೆ 20 ಕೋ.ರೂ. ವೆಚ್ಚದಲ್ಲಿ ‘ಜೀವನಚೈತ್ರ ಯಾತ್ರೆ’ ಆರಂಭಿಸಲು ಕ್ರಮ.
►ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ
►ಪ್ರತಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಿಗೆ ಪ್ರಶಸ್ತಿ
►ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 66 ಕೋ.ರೂ. ವೆಚ್ಚದಲ್ಲಿ 100 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ.
►ಯುವಜನತೆಯಲ್ಲಿ ನಾಯಕತ್ವ ಹಾಗೂ ವೌಲ್ಯ ರೂಪಿಸಲು ಅನಂತಕುಮಾರ ಪ್ರತಿಷ್ಠಾನ ಸ್ಥಾಪನೆಗೆ 10 ಕೋ.ರೂ. ಅನುದಾನ.
►ಬಿಎಂಟಿಸಿಗೆ 1500 ಹೊಸ ಬಸ್‌ಗಳ ಖರೀದಿ
►ಕುಡಿಯುವ ನೀರು: ಮನೆಮನೆಗೆ ಗಂಗೆ ಯೋಜನೆ ಘೋಷಣೆ. 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಕ್ರಮ. ವಿಜಯಪುರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆಗಳಿಗೆ 700 ಕೋ.ರೂ. ಅನುದಾನ.
►ಕೈಗಾರಿಕ ಕ್ಲಸ್ಟರ್: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಉತ್ಪನ್ನ ನಿರ್ದಿಷ್ಟ ಕೈಗಾರಿಕ ಕ್ಲಸ್ಟರ್ ಅಭಿವೃದ್ದಿಗೆ ಕ್ರಮ. ಅದರಂತೆ ಶಿವಮೊಗ್ಗದಲ್ಲಿ ಹೆಲ್ತ್ ಆ್ಯಂಡ್ ವೆಲ್‌ನೆಸ್ ಹಾಗೂ ಧಾರವಾಡದಲ್ಲಿ ಹೋ ಆ್ಯಂಡ್ ಪರ್ಸನಲ್ ಕೇರ್ ಕನ್ಸೂಮರ್ ಗೂಡ್ಸ್ ಮ್ಯಾನ್ಯೂಫ್ಯಾಕ್ಚರಿಂಗ್ ಕ್ಲಸ್ಟರ್ ಅಭಿವೃದ್ಧಿ.
►ಕಾರ್ಮಿಕರಿಗೆ ಮಾಸಿಕ ಬಸ್ ಪಾಸ್, 25 ಕೋಟಿ ರೂ. ಮೀಸಲು
►ಪ್ರತಿ ತಿಂಗಳಲ್ಲಿ 2 ಶನಿವಾರ 'ಬ್ಯಾಗ್ ರಹಿತ ದಿನ', 'ಸಂಭ್ರಮ ಶನಿವಾರ'
►ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ: 2020-21ನೇ ಆಯವ್ಯಯದಲ್ಲಿ ಶೇ.15ರಷ್ಟನ್ನು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮೀಸಲು. ಮಕ್ಕಳ ಆಯವ್ಯಯವನ್ನು ನಮ್ಮ ಸರಕಾರ ಇತಿಹಾಸದಲ್ಲಿ ಮೊದಲ ಬಾರಿ ಮಂಡಿಸುತ್ತಿದೆ. ಇದಕ್ಕಾಗಿ 36,340 ಕೋ.ರೂ. ಮೀಸಲಿಡಲಾಗಿದೆ ಎಂದರು ಸಿಎಂ ಬಿಎಸ್‌ವೈ.
►ಮೊಬೈಲ್ ಕ್ಲಿನಿಕ್: ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ 10 ಮೊಬೈಲ್ ಕ್ಲಿನಿಕ್. 10 ಸಂಚಾರಿ ಶಿಶುಪಾಲನಾ ಕೇಂದ್ರಗಳ ಆರಂಭ.
►ಬ್ರೈನ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪನೆ: ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಬ್ರೈನ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪನೆ. ಇದಕ್ಕೆ 30 ಲಕ್ಷ ರೂ. ಮೀಸಲು.
►ಕಾರ್ಕಳ, ಹಾವೇರಿಯ ಶಿಗ್ಗಾಂವಿಯಲ್ಲಿ ನೂತನ ಜವಳಿ ಪಾರ್ಕ್
►400 ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ
►ಕ್ರೀಡಾಕೌಶಲ್ಯ ತರಬೇತಿಗಾಗಿ 5 ಕೋಟಿ ರೂ.
►ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 5 ಕೋಟಿ ರೂ.
►ಕಳಸಾ ಬಂಡೂರಿಗೆ ಕಾಮಗಾರಿಗೆ 500 ಕೋಟಿ ರೂ.
►ಅಂಧ ವಿದ್ಯಾರ್ಥಿಗಳಿಗೆ 25 ಸಾವಿರ ರೂ. ಮೌಲ್ಯದ ಕಿಟ್ ವಿತರಣೆ
► ಸಂತ ಶಿಶುನಾಳ ಶರೀಫರ ಸಮಾಧಿ ಅಭಿವೃದ್ಧಿಗೆ 5 ಕೋಟಿ ರೂ.
►ಮಂಗಳೂರಿನ ಕುಳಾಯಿಯಲ್ಲಿ ಬಂದರು ಅಭಿವೃದ್ಧಿ
‘ಶಿಕ್ಷಕ ಮಿತ್ರ’ ಆ್ಯಪ್ ಅಭಿವೃದ್ಧಿ: ಶಿಕ್ಷಕರಿಗೆ ಎಲ್ಲ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ಕ್ರಮ. ಶಿಕ್ಷಕರಿಗಾಗಿ ‘ಶಿಕ್ಷಕ ಮಿತ್ರ’ ಆ್ಯಪ್ ಅಭಿವೃದ್ದಿಪಡಿಸಲು ಕ್ರಮ.
►ನವಜಾತ ಶಿಶು ಪೋಷಣ ಘಟಕಗಳ ಸ್ಥಾಪನೆ
►ಕ್ರೈಸ್ತ ಸಮುದಾಯಕ್ಕೆ 200 ಕೋಟಿ ರೂ.
►ಕೆಎಸ್ಸಾರ್ಟಿಸಿಗೆ 2450 ಹೊಸ ಬಸ್
►ಎಸ್.ಎಲ್. ಭೈರಪ್ಪ ಹುಟ್ಟೂರಿನ ಅಭಿವೃದ್ಧಿಗೆ 5 ಕೋಟಿ ರೂ.
►ಆನ್ ಲೈನ್ ನಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವವರಿಗೆ ಕೊಡುಗೆ
►1 ಸಾವಿರ ಮಂದಿಗೆ 25 ಸಾವಿರ ರೂ. ನೆರವು
►ಸಿದ್ದರಾಮ್ಯಯರ ಬಾದಾಮಿ ಕ್ಷೇತ್ರಕ್ಕೆ 25 ಕೋಟಿ ರೂ.
►ಜನವರಿ 1ರಂದು ಅಮರ ಶಿಲ್ಪಿ ಜಕಣಾಚಾರಿ ಜನ್ಮ ದಿನಾಚರಣೆ
►ಸರ್ಕಾರದಿಂದ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿ ಯೋಜನೆ ಆರಂಭ
►ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ.
► ಪಪೂ ಕಾಲೇಜುಗಳಾಗಿ ಮೊರಾರ್ಜಿ ದೇಸಾಯಿ ಶಾಲೆಗಳು ಮೇಲ್ದರ್ಜೆಗೆ
► ಬೆಂಗಳೂರು ಫಿಲಂ ಸಿಟಿಗೆ 500 ಕೋಟಿ ರೂ. ಮೀಸಲು
► ಬಸವಣ್ಣ ಪ್ರತಿಮೆ ನಿರ್ಮಾಣಕ್ಕೆ 20 ಕೋಟಿ ರೂ.
► ಪೊಲೀಸ್ ಸಿಬ್ಬಂದಿಗೆ ಗೃಹ ಭಾಗ್ಯ ಯೋಜನೆ
►ತೆರಿಗೆ ಏರಿಕೆ: ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಡೀಸೆಲ್ : 1.59 ರೂ., ಪೆಟ್ರೋಲ್: 1.60 ರೂ. ಹೆಚ್ಚಳ
► ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ಯೋಜನೆ, 5 ಕೋಟಿ ರೂ. ಮೀಸಲು
► 60 ವರ್ಷ ಮೇಲ್ಪಟ್ಟ ಬಿಪಿಎಲ್ ಕಾರ್ಡ್ ದಾರರಿಗೆ ಹೊಸ ಯೋಜನೆ
► ಆಯ್ದ 5 ಜಿಲ್ಲೆಗಳಲ್ಲಿ ಉಚಿತ ಡಯಾಲಿಸಿಸ್
► ಕಲ್ಯಾಣ ಕರ್ನಾಟಕ ಯೋಜನೆಗೆ 1500 ಕೋಟಿ ರೂ.
►1 ಲಕ್ಷ ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್
►ಮಹಾದಾಯಿ ಯೋಜನೆಗೆ 500 ಕೋ.ರೂ. ಹಾಗೂ ಎತ್ತಿನಹೊಳೆ ಯೋಜನೆಗೆ 1500 ಕೋ.ರೂ. ಅನುದಾನ
►ಶಿವಮೊಗ್ಗದಲ್ಲಿ ಕೃಷಿ ವಿವಿ ಸ್ಥಾಪನೆ
►ಮಳೆ ನೀರು ಜಲಸಂರಕ್ಷಣೆಗೆ ವಿಶೇಷ ಯೋಜನೆ
►ಜಲಾನಯನ ಪ್ರದೇಶ ಅಭಿವೃದ್ಧಿಗೆ ಕ್ರಮ
►ಆಹಾರ ಸಂಸ್ಕರಣಾ ಘಟಕಕ್ಕೆ ಅಗತ್ಯ ನೆರವು
►ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ ಯೋಜನೆ, 5 ಕೋಟಿ ರೂ. ಮೀಸಲು
►ನವನಗರ ನಗರೋತ್ಥಾನ ಯೋಜನೆ (ಬೆಂಗಳೂರು) 8,334 ಕೋಟಿ ರೂ.
► ಅಂಬಿಗರ ಚೌಡಯ್ಯ ಅಭಿವೃದ್ಧಿ ಯೋಜನೆಗೆ 50 ಕೋಟಿ ರೂ.
► ರೈತರಿಗೆ, ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
►ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ ರೂ.
► ಕಿಸಾನ್ ಸಮ್ಮಾನ್ ಯೋಜನೆಗೆ 2,600 ಕೋಟಿ ರೂ. ಮೀಸಲು
►ರೈತರಿಗಾಗಿ 900 ಕೋಟಿ ರೂ. ಮೀಸಲು
► ಸಾವಯವ ಕೃಷಿ ಪ್ರೋತ್ಸಾಹಿಸಲು 200 ಕೋಟಿ ರೂ.
►ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್
► ಸಣ್ಣ, ಅತಿ ಸಣ್ಣ ರೈತರಿಗೆ 10 ಸಾವಿರ ರೂ. ನೆರವು
ಬೆಂಗಳೂರು, ,ಮಾ.5: ವಿಧಾನಸಭೆಯಲ್ಲಿ 2020-21ನೇ ಸಾಲಿನ ಬಜೆಟ್ ಮಂಡನೆಯನ್ನು ಬೆಳಗ್ಗೆ 11 ಗಂಟೆಗೆ ಆರಂಭಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ರಾಜ್ಯವು ಒಂದೆಡೆ ಬರ ಹಾಗೂ ಮತ್ತೊಂದೆಡೆ ನೆರೆ ಏಕಕಾಲದಲ್ಲಿ ಎದುರಿಸಿದೆ.7 ಲಕ್ಷ ಜನರ ಬದುಕಿಗೆ ತೊಂದರೆಯಾಗಿದೆ. ಸಮೃದ್ಧ ಕರ್ನಾಟಕಕ್ಕೆ ಸರಕಾರ ಬದ್ಧವಾಗಿದೆ. ಈವರೆಗೆ 4.45 ಲಕ್ಷ ರೈತರಿಗೆ ಪರಿಹಾರ ಒದಗಿಸಿದ್ದೇವೆ. ಪರಿಹಾರ ಹಾಗೂ ಪುನರ್ವಸತಿಗೆ ಸಾಕಷ್ಟು ಗಮನ ಕೊಟ್ಟಿದ್ದೇವೆ ಎಂದರು.
ಮುಖ್ಯಮಂತ್ರಿ ಬಜೆಟ್ ಮಂಡಿಸಲು ಆರಂಭಿಸಿದಾಗ ಬಜೆಟ್ ಪುಸ್ತಕ ವಿತರಿಸದೇ ಇರುವುದಕ್ಕೆ ವಿಪಕ್ಷ ಸದಸ್ಯರು ಗದ್ದಲ ನಡೆಸಿದರು. ಕಳೆದ ವರ್ಷದ ಬಜೆಟ್ ಅಧಿವೇಶನ ಹಾಗು ಲೋಕಸಭೆ ಬಜೆಟ್‌ನಲ್ಲೂ ಹೀಗೆಯೇ ನಡೆದಿತ್ತು. ಬಜೆಟ್ ಪ್ರತಿ ಮೊದಲೇ ಕೊಡುವುದಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟನೆ ನೀಡಲು ಯತ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಜೆಟ್ ಪ್ರತಿಗಳ ವಿತರಣೆಗೆ ಸಮ್ಮತಿ ನೀಡಿದರು.







