ತೆರಿಗೆ ಹೊರೆ: ಡೀಸೆಲ್, ಪೆಟ್ರೋಲ್ ದುಬಾರಿ
ರಾಜ್ಯ ಬಜೆಟ್ 2020-21

ಬೆಂಗಳೂರು, ಮಾ.5: ರಾಜ್ಯ ಬಜೆಟ್‌ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಂಡಿಸುತ್ತಿರುವ 2020-21ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಶೇ.32ರಿಂದ ಶೇ.35ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆ ಶೇ.21ರಿಂದ ಶೇ.24ಕ್ಕೆ ಏರಿಕೆ ಮಾಡಿರುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಒಂದು ಲೀಟರ್ ಪೆಟ್ರೊಲ್ ದರಲ್ಲಿ 1.60 ರೂ. ಹಾಗೂ ಡೀಸೆಲ್ ದರದಲ್ಲಿ 1.59 ರೂ. ಏರಿಕೆಯಾಗಲಿದೆ.
Next Story





