ಹೊಸಂಗಡಿ: ಮಾ.15 ರಂದು ಕೇರಳ ತುಳು ಭವನ ಲೋಕಾರ್ಪಣೆ

ಕಾಸರಗೋಡು: ಹೊಸಂಗಡಿ ಬಳಿಯ ದುರ್ಗಿಪಳ್ಳದಲ್ಲಿ ನಿರ್ಮಿಸಲಾದ ಕೇರಳ ತುಳು ಅಕಾಡೆಮಿಯ ಕಾರ್ಯಾಲಯ "ಕೇರಳ ತುಳು ಭವನ"ದ ಲೋಕಾರ್ಪಣೆ ಮಾ.15ರಂದು ನಡೆಯಲಿದೆ. ಕೇರಳ ಸಾಂಸ್ಕೃತಿಕ ಸಚಿವ ಎ. ಕೆ ಬಾಲನ್ ಭವನವನ್ನು ಉದ್ಘಾಟಿಸಲಿದ್ದಾರೆ.
ಸ್ವಾಗತ ಸಮಿತಿ ರಚನೆ ಸಭೆ ಮಾ. 8ರಂದು ಬೆಳಗ್ಗೆ 10 ಗಂಟೆಗೆ ಹೊಸಂಗಡಿ ಗೇಟ್ ವೇ ಸಭಾಂಗಣದಲ್ಲಿ ನಡೆಯಲಿದೆ. ಕೇರಳ ತುಳು ಅಕಾಡೆಮಿ ಪದಾಧಿಕಾರಿಗಳು, ಸದಸ್ಯರು, ತುಳು ಅಭಿಮಾನಿಗಳು ಭಾಗವಹಿಸುವಂತೆ ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ತಿಳಿಸಿದ್ದಾರೆ .
ಅಕಾಡೆಮಿ ಸದಸ್ಯರ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಆವರಣದ ಕೇರಳ ತುಳು ಅಕಾಡೆಮಿ ಕಚೇರಿಯಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಸಚಿತಾ ರೈ, ಗೀತಾಸಾಮಾನಿ, ರಾಮಕೃಷ್ಣ ಕಡಂಬಾರ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಭಾರತೀ ಬಾಬು, ಬಾಲಕೃಷ್ಣ ಶೆಟ್ಟಿಗಾರ್ ಬಿ., ಪ್ರದೀಪ್ ಕುಮಾರ್ ಬಿ. ಉಪಸ್ಥಿತರಿದ್ದರು.
Next Story





