ಮುರ್ಡೇಶ್ವರ ಲಯನ್ಸ್ ಕ್ಲಬ್‍ನ ಸಮಾಜಸೇವೆ ಶ್ಲಾಘನೀಯವಾದುದು:ಲಯನ್ ಡಿಸ್ಟ್ರಿಕ್ಟ್ ಗವರ್ನರ್ ಕೆ. ಶಶಿಂದ್ರನ್ ನಾಯರ್

ಭಟ್ಕಳ: ಲಯನ್ಸ್ ಕ್ಲಬ್ ಮುರ್ಡೇಶ್ವರವು ಹಲವಾರು ವಿಭಾಗಗಳಲ್ಲಿ ಸಮಾಜಕ್ಕೆ ಸೇವೆ ನೀಡುತ್ತಿದ್ದು, ಲಯನ್ಸ್ ಜಿಲ್ಲೆಯಲ್ಲಿಯೇ ಮಾದರಿಯ ಕ್ಲಬ್ ಎನಿಸಿಕೊಂಡಿದೆ ಎಂದು ಲಯನ್ಸ್ 317ಬಿ ಜಿಲ್ಲೆಯ ಗವರ್ನರ್ ಕೆ. ಶಶಿಂದ್ರನ್ ನಾಯರ್ ಹೇಳಿದರು.
ಅವರು ಮುರ್ಡೇಶ್ವರಕ್ಕೆ ಭೇಟಿ ನೀಡಿ ಲಯನ್ಸ್ ಕ್ಲಬ್‍ನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇತ್ತೀಚೆಗೆ ನೆರೆಪೀಡಿತ ಪ್ರದೇಶಗಳಿಗೆ ಹೋಗಿ ಮನೆಮನೆ ಭೇಟಿ ನೀಡಿ ಅವರಿಗೆ ಆವಶ್ಯಕ ವಸ್ತುಗಳನ್ನು ನೀಡಿ ಸಹಾಯ ಮಾಡುವ ಮೂಲಕ ಮುರ್ಡೇಶ್ವರ ಕ್ಲಬ್ ಲಯನ್ಸ್ ಉದ್ದೇಶಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ. ಇವರು ಶೈಕ್ಷಣಿಕವಾಗಿ ನಡೆಸಿರುವ ಚಟುವಟಿಕೆಗಳು, ಯುವಜನತೆಯಲ್ಲಿ ಮೂಡಿಸುತ್ತಿರುವ ಜಾಗೃತಿ ಕಾರ್ಯಕ್ರಮಗಳು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಮುರ್ಡೇಶ್ವರಕ್ಕೆ ಆಗಮಿಸಿದ ಗವರ್ನರ್ ಮೊದಲು ಬಸ್ತಿಮಕ್ಕಿಯಲ್ಲಿ ನಿರ್ಮಿಸಿದ “ಲಯನ್ಸ್ ಸ್ವಾಗತ ಫಲಕ”ವನ್ನು ಅನಾವರಣಗೊಳಿಸಿ ಮುರ್ಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ “ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸಾ ಶಿಬಿರ”ವನ್ನು ಉದ್ಘಾಟಿಸಿದರು. ಶಿಬಿರದಲ್ಲಿ 125ಜನರು ಕಣ್ಣಿನ ತಪಾಸಣೆಗೆ ಒಳಗಾಗಿ ಅದರಲ್ಲಿ 25ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಗಿದ್ದು, 26ಜನರಿಗೆ ಕನ್ನಡಕವನ್ನು ವಿತರಿಸಲಾಯಿತು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಕೆರೆಕಟ್ಟೆ ಸರಕಾರಿ ಶಾಲೆಗೆ 25ಕುರ್ಚಿಗಳನ್ನು ಹಾಗೂ ಆ ಶಾಲೆಯ ಮಗುವಿಗೆ ಕ್ಯಾನ್ಸರ್ ನಿವಾರಣೆಯ ಅಡಿಯಲ್ಲಿ 10,000ರೂಪಾಯಿಗಳನ್ನು ವಿತರಿಸಲಾಯಿತು.
ಸಮಾಜ ಸೇವಕರಾದ ವಸಂತ ಚಂದಾವರ್ಕರ್, ರಯೀಶ್ ಅಹ್ಮದ್, ದೇಹದಾಢ್ರ್ಯಪಟು ವೈಭವ ನಾಯ್ಕರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಭಟ್ಕಳ ತಾಲೂಕಿನ ಪ್ರಾಥಮಿಕ ಶಾಲಾ ವಿಭಾಗದಿಂದ ಉತ್ತಮ ಶಿಕ್ಷಕರಾದ ಮನೋಜ್ ಶೆಟ್ಟಿಯವರಿಗೆ “ವಾಜಂತ್ರಿ” ಪ್ರಶಸ್ತಿಯನ್ನು ಹಾಗೂ ಭಟ್ಕಳ ತಾಲೂಕಿನ ಪ್ರೌಢಶಾಲಾ ವಿಭಾಗದಿಂದ ಉತ್ತಮ ಶಿಕ್ಷಕರಾದ ಚೆನ್ನವೀರ ಹೊಸ್ಮನಿಯವರಿಗೆ “ಉಡುಪ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಜೀವನ ನಿರ್ವಹಣೆಗಾಗಿ ಮಹಿಳೆಗೆ ಹೊಲಿಗೆ ಯಂತ್ರವನ್ನು ಜಿಲ್ಲಾ ಲಯನ್ಸ್ ಕ್ಲಬ್ ವತಿಯಿಂದ ನೀಡಲಾಯಿತು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲಾ ಕಾರ್ಯದರ್ಶಿ ಜೈಅಮೋಲ್ ನಾಯ್ಕ, ಝೋನ್ ಚೇರ್‍ಪರ್ಸನ್ ಎಮ್.ವಿ ಹೆಗಡೆ, ಗೌರೀಶ ನಾಯ್ಕ ಉಪಸ್ಥಿತರಿದ್ದರು. ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ಸ್ ಸೇವಾ ಚಟುವಟಿಕೆಗಳ ವರದಿಯನ್ನು ವಾಚಿಸಿದರು. ಲಯನ್ಸ್ ಅಧ್ಯಕ್ಷರ ರಾಮದಾಸ ಶೇಟ್ ಸ್ವಾಗತಿಸಿದರು. ಡಾ.ಸುನೀಲ್ ಜತ್ತನ್ ವಂದಿಸಿದರು. ಲಯನ್ಸ್ ಸದಸ್ಯರಾದ ಕೃಷ್ಣ ಹೆಗಡೆ, ಜ್ಞಾನೇಶ ಮಾನಕಾಮೆ ಹಾಗೂ ಪೂರ್ಣಿಮಾ ಕರ್ಕಿಕರ ಕಾರ್ಯಕ್ರಮ ನಿರ್ವಹಿಸಿದರು.







