ಮಂಗಳೂರು: ಹಳೆಕೋಟೆ ಮಾರಿಯಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಮಂಗಳೂರು, ಮಾ.5: ಕರಾವಳಿಯ ಅತ್ಯಂತ ಪುರಾತನ ದೇಗುಲಗಳಲ್ಲಿ ಒಂದಾಗಿರುವ ಬೋಳಾರ ಹಳೆಕೋಟೆ ಮಾರಿಯಮ್ಮ ಮಹಿಷ ಮರ್ಧಿನಿ ದೇವಸ್ಥಾನದ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಗುರುವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಸುಮಾರು 800 ವರ್ಷಗಳ ಇತಿಹಾಸವಿರುವ ಬೋಳಾರ ಹಳೇಕೋಟೆ ಮಾರಿಯಮ್ಮ ಮಹಿಷ ಮರ್ಧಿನಿ ದೇವಸ್ಥಾನವು ಪೌರಾಣಿಕ ಇತಿಹಾಸಗಳ ಕುರುಹುಗಳನ್ನು ಉಳಿಸಿಕೊಂಡಿರುವ ದೇವಾಲಯಗಳಲ್ಲಿ ಒಂದಾಗಿದೆ. ನಗರದ ಪ್ರಮುಖ ಕ್ಷೇತ್ರಗಳ ಅಭಿವೃದ್ಧಿಯ ಕುರಿತು ವಿಶೇಷ ಕಾಳಜಿ ವಹಿಸಿರುವ ಸರಕಾರ ಶ್ರೀ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ 20 ಲಕ್ಷ ರೂ.ಅನುದಾನ ಬಿಡುಗಡೆಗೊಳಿಸಿದೆ ಎಂದರು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನವನೀತ ಶೆಟ್ಟಿ ಕದ್ರಿ, ಕಾರ್ಪೊರೇಟರ್‌ಗಳಾದ ರೇವತಿ ಶ್ಯಾಮ ಸುಂದರ, ಪ್ರೇಮಾನಂದ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತಾರನಾಥ ಶೆಟ್ಟಿ ಬೋಳಾರ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ, ಬಿ. ಕೇಶವ ಶೆಟ್ಟಿ, ಪ್ರಧಾನ ಅರ್ಚಕ ನಾರಾಯಣ ಭಟ್, ಪ್ರವೀಣ್ ಶೇಟ್, ದೀಪಕ್ ಪೈ, ರಮಾನಂದ ಪೂಜಾರಿ, ಗಂಗಾಧರ ಕೋಟ್ಯಾನ್, ಮುರುಳಿಧರ್ ಬೋಳಾರ್, ಉಮಾನಾಥ ಶೆಟ್ಟಿಗಾರ್, ಅನಿಲ್, ಸುನೀಲ್ ಮತ್ತಿತರರಿದ್ದರು.





