ಮಾನವನಿಂದ ಸಾಕು ನಾಯಿಗೆ ಹರಡಿತೇ ಕೊರೋನ?

ಹಾಂಕಾಂಗ್, ಮಾ. 5: ಹಾಂಕಾಂಗ್‌ನಲ್ಲಿ ಕೊರೋನವೈರಸ್ ರೋಗಿಯೊಬ್ಬರ ಸಾಕುನಾಯಿಗೂ ರೋಗದ ಸೋಂಕು ಹಬ್ಬಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇದು ಮಾನವರಿಂದ ಪ್ರಾಣಿಗಳಿಗೆ ಸೋಂಕು ಹರಡಿದ ಪ್ರಕರಣವಾಗಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
60 ವರ್ಷ ಪ್ರಾಯದ ಮಹಿಳಾ ರೋಗಿಯ ನಾಯಿಯಲ್ಲಿ ನೂತನ-ಕೊರೋನವೈರಸ್ ಸೋಂಕು ಇರುವುದು ಶುಕ್ರವಾರದಿಂದ ನಡೆಸಲಾಗುತ್ತಿರುವ ಪರೀಕ್ಷೆಗಳಲ್ಲಿ ಖಚಿತಪಟ್ಟಿದೆ. ಅಂದಿನಿಂದ ನಾಯಿಯನ್ನು ಪ್ರಾಣಿ ಆಶ್ರಯ ಕೇಂದ್ರವೊಂದರಲ್ಲಿ ಪ್ರತ್ಯೇಕವಾಗಿರಿಸಲಾಗಿದೆ.
ಇದು ಮಾನವರಿಂದ ಪ್ರಾಣಿಗಳಿಗೆ ರೋಗ ಹರಡಿದ ಪ್ರಕರಣವಾಗಿರಬಹುದು ಎನ್ನುವುದಕ್ಕೆ ವಿಶ್ವವಿದ್ಯಾನಿಲಯಗಳ ಪರಿಣತರು ಮತ್ತು ವಿಶ್ವ ಪ್ರಾಣಿ ಆರೋಗ್ಯ ಸಂಘಟನೆ ಸಹಮತ ವ್ಯಕ್ತಪಡಿಸಿದ್ದಾರೆ.
Next Story





