ಮಂಗಳೂರು: ಆರ್ಥಿಕ ಗಣತಿ ಪ್ರಗತಿ ಸಭೆ

ಮಂಗಳೂರು, ಮಾ.5: ಮಂಗಳೂರು ಮಹಾನಗರಪಾಲಿಕೆಯ 2019ನೆ ಸಾಲಿನ 7ನೇ ಆರ್ಥಿಕ ಗಣತಿಯ ಪ್ರಗತಿ ಸಭೆಯು ಗುರುವಾರ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು.
ಮನಪಾ ಉಪಾಯುಕ್ತ ಡಾ.ಸಂತೋಷ್ ಕುಮಾರ್ ಮಾತನಾಡಿ ಆರ್ಥಿಕ ಗಣತಿಯ ಸಂದರ್ಭ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು. ಅದರಲ್ಲೂ ತಕ್ಷಣ ಹತ್ತಿರದ ಹೆಲ್ತ್ ಇನ್‌ಸ್ಪೆಕ್ಟರ್, ಸ್ಥಳೀಯ ಕಾರ್ಪೊರೇಟರ್‌ಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದರಲ್ಲದೆ, ಆರ್ಥಿಕ ಗಣತಿಯು ನಿಧಾನಗತಿಯಲ್ಲಿ ಸಾಗುತ್ತಿದೆ. ಮಾರ್ಚ್ 23ರೊಳಗೆ ಗಣತಿ ಕಾರ್ಯ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಮಂಗಳೂರು ಮನಪಾ ಆರ್ಥಿಕ ಗಣತಿ ಉಸ್ತುವಾರಿ ಸಮಿತಿಯ ಸಹಾಯಕ ನಿರ್ದೇಶಕಿ (ಸಾಂಖ್ಯಿಕ), ಸದಸ್ಯ ಕಾರ್ಯದರ್ಶಿ ಸುಷ್ಮಾ ಕೆ.ಎಸ್. ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
Next Story





