ಕುಕ್ಕಾವು: ದ.ಕ., ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ

ಮಂಗಳೂರು, ಮಾ.5: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ದಾನಿಗಳ ನೆರವಿನಿಂದ ನಿರ್ಮಿಸಿದ ಕುಕ್ಕಾವು ಪ್ರದೇಶದ ಮನೆಯ ಕೀ ಹಸ್ತಾಂತರ ಕಾರ್ಯಕ್ರಮ ಗುರುವಾರ ಬೆಳಗ್ಗೆ ನೆರವೇರಿತು.
ದಾನಿಗಳಿಂದ ಸಂಗ್ರಹಿಸಿದ ಮೊತ್ತದಿಂದ ಮನೆಯ ಸಂಪೂರ್ಣ ಕೆಲಸ ಕಾರ್ಯಗಳನ್ನು ಮುಗಿಸಿದ್ದು, ಇಂದು ಮನೆಯ ಯಜಮಾನರಿಗೆ ಟ್ರಸ್ಟಿನ ಸದಸ್ಯರು ಕೀ ಹಸ್ತಾಂತರಿಸುವ ಮೂಲಕ ಮನೆಯ ಉದ್ಘಾಟನಾ ಕಾರ್ಯಕ್ರಮವು ನಡೆಯಿತು.
ನೂರುಲ್ ಹುದಾ ಮಸೀದಿಯ ಸದರ್ ಮುಅಲ್ಲಿಂ ಸಮೀರ್ ಅಶ್ರಫಿ ಪ್ರಾರ್ಥಿಸಿದರು. ಸಮಾರಂಭದಲ್ಲಿ ಕುಕ್ಕಾವು ನೂರುಲ್ ಹುದಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಕುಕ್ಕಾವು, ಧರ್ಮಗುರುಗಳಾದ ಜಾಫರ್ ಸಅದಿ, ಸಾದಿಕ್ ಮುಸ್ಲಿಯಾರ್, ಅಲ್ಫಾಝ್ ಮುಸ್ಲಿಯಾರ್ ಹಾಗೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಹೆಲ್ಪ್ ಲೈನ್ ಚಾರಿಟೇಬಲ್ ಟ್ರಸ್ಟ್ (ರಿ) ಇದರ ಕಾರ್ಯಾಧ್ಯಕ್ಷ ಬಶೀರ್ ಕೂರ್ನಡ್ಕ, ಉಪಾಧ್ಯಕ್ಷ ಕಾಸೀಂ ಮುಸ್ಲಿಯಾರ್ ಮಾಚಾರ್, ಕಾರ್ಯದರ್ಶಿ ಅಬ್ದುಲ್ ರಹ್ಮಾನ್ (ಮುನ್ನ ಕಮ್ಮರಡಿ), ಹಕೀಂ ಕೆ.ಸಿ ರೋಡ್, ಸಫ್ವಾನ್ ಮಲ್ಪೆ, ಲತೀಫ್ ಹಂಡೇಲ್, ಸಿದ್ದೀಕ್ ಕೋಯ, ಸ್ಥಳೀಯರಾದ ಕೆ.ಎಂ ಇಬ್ರಾಹಿಮ್ ಹಸೈನಾರ್, ಬಶೀರ್ ಕುಕ್ಕಾವು, ರಶೀದ್ ಕಾಜೂರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯ ನಿರ್ವಾಹಕ ಅಜಯ್ ಮತ್ತಿತರರು ಉಪಸ್ಥಿತರಿದ್ದರು.












