ಶಬರಿಮಲೆ ಬಳಿಕ ಸಿಎಎ ವಿರುದ್ಧದ ಮನವಿಗಳ ವಿಚಾರಣೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮಾ. 5: ಶಬರಿಮಲೆ ಪ್ರಕರಣದ ವಿಚಾರಣೆಯ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಪ್ರಕರಣವನ್ನು ತುರ್ತು ವಿಚಾರಣೆ ನಡೆಸುವಂತೆ ಹಿರಿಯ ನ್ಯಾಯಾವಾದಿ ಕಪಿಲ್ ಸಿಬಲ್ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠಕ್ಕೆ ತಿಳಿಸಿದರು ಹಾಗೂ ಇಂದಿನ ದಿನಾಂಕದ ವರೆಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ಸಲ್ಲಿಸಿಲ್ಲ ಎಂದು ಹೇಳಿದರು.
ಶಬರಿಮಲೆ ದೇವಾಲಯ ಹಾಗೂ ಮಸೀದಿಗೆ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದಲ್ಲಿರುವ ಜನನಾಂಗ ಛೇದದ ಆಚರಣೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಿಷಯಗಳನ್ನು 9 ನ್ಯಾಯಾಧೀಶರ ನ್ಯಾಯಪೀಠ ಮರು ಪರಿಶೀಲನೆ ನಡೆಸುತ್ತಿದೆ.
Next Story





