ಪ್ರಧಾನಿಯ ಚಿಂತನೆ ಭಾರತದ ಆರ್ಥಿಕತೆಯನ್ನು ನಾಶಗೊಳಿಸಿದೆ: ರಾಹುಲ್ ಗಾಂಧಿ

ಹೊಸದಿಲ್ಲಿ, ಮಾ. 6: ಯೆಸ್ ಬ್ಯಾಂಕ್‌ನ ಖಾತೆಯಿಂದ ಹಣ ಹಿಂದೆಗೆಯಲು ಮಿತಿ ಹೇರಿರುವ ಸರಕಾರದ ಕ್ರಮವನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಚಿಂತನೆಗಳು ದೇಶದ ಆರ್ಥಿಕತೆಯನ್ನು ನಾಶ ಮಾಡಿವೆ ಎಂದಿದ್ದಾರೆ. ಯೆಸ್ ಬ್ಯಾಂಕ್ ಇಲ್ಲ. ಮೋದಿ ಹಾಗೂ ಅವರ ಚಿಂತನೆಗಳು ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಿವೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಯಸ್ ಬ್ಯಾಂಕ್‌ನ ಖಾತೆಯಿಂದ ತಿಂಗಳ ಕಾಲ 50 ಸಾವಿರ ರೂಪಾಯಿಗಿಂತ ಹೆಚ್ಚು ಹಣ ಹಿಂದೆಗೆಯದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ಮಿತಿ ವಿಧಿಸಿತ್ತು ಹಾಗೂ ಯೆಸ್ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಬರ್ಖಾಸ್ತುಗೊಳಿಸಿತ್ತು.
Next Story





