ಹೆದ್ದಾರಿ ಭೂಸ್ವಾಧೀನ: ಪರಿಹಾರ ಕೋರಿಕೆಗೆ ಅರ್ಜಿ ಸಲ್ಲಿಸಲು ಸೂಚನೆ
ಉಡುಪಿ, ಮಾ.6: ಬೈಂದೂರು ತಾಲೂಕು ಶಿರೂರು ಗ್ರಾಮದ ಗಡಿಯಿಂದ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಗಡಿಯವರೆಗೆ ಖಾಸಗಿ ಜಮೀನು ಗಳನ್ನು ರಾಷ್ಟ್ರೀಯ ಹೆದ್ದಾರಿ 66(17) ಅಗಲೀಕರಣಕ್ಕಾಗಿ ಭೂಸ್ವಾಧೀನ ಗೊಳಿಸಿದ ಜಮೀನುಗಳ ಮಾಲಕರಿಗೆ ಸೂಕ್ತ ದಾಖಲೆ ಗಳನ್ನು ಹಾಜರುಪಡಿಸಿ ಪರಿಹಾರವನ್ನು ಪಡೆದುಕೊಳ್ಳಲು ನೋಟೀಸ್ ಮೂಲಕ ತಿಳುವಳಿಕೆ ನೀಡಿದ್ದರೂ, ಈವರೆಗೆ ಹಲವು ಮಂದಿ ಭೂಮಾಲಕರು ಸೂಕ್ತ ದಾಖಲೆಗಳನ್ನು ಹಾಜರುಪಡಿಸಿ ಪರಿಹಾರ ಪಡೆದುಕೊಂಡಿಲ್ಲ.
ಆದ್ದರಿಂದ ಇನ್ನು ಒಂದು ತಿಂಗಳ ಅವಧಿಯೊಳಗೆ ರಾಷ್ಟ್ರೀಯ ಹೆದ್ದಾರಿ 66 (17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಇವರಿಗೆ ಅಗತ್ಯ ದಾಖಲೆಗಳನ್ನು ಹಾಜರುಪಡಿಸಿ ನಿಗದಿಪಡಿಸಿದ ಪರಿಹಾರ ಪಡೆಯುವಂತೆ ಸಕ್ಷಮ ಪ್ರಾಧಿಕಾರಿಗಳಾದ ರಾ.ಹೆ. 66(17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





