ಇರಾನ್: ಕೊರೊನಾವೈರಸ್ ನಿಂದ ಸಿರಿಯ ಮಾಜಿ ರಾಯಭಾರಿ ಸಾವು

ಟೆಹರಾನ್, ಮಾ. 6: ಸಿರಿಯಕ್ಕೆ ಇರಾನ್ ದೇಶದ ಮಾಜಿ ರಾಯಭಾರಿ ಹುಸೈನ್ ಶೇಖ್-ಉಲ್-ಇಸ್ಲಾಮ್ ಕೊರೋನವೈರಸ್ ಕಾಯಿಲೆಗೆ ಗುರುವಾರ ಬಲಿಯಾಗಿದ್ದಾರೆ ಎಂದು ಆ ದೇಶದ ಅಧಿಕೃತ ಸುದ್ದಿ ಸಂಸ್ಥೆ ‘ಇರ್ನ’ ವರದಿ ಮಾಡಿದೆ.
ಇರಾನ್‌ನಲ್ಲಿ ಕೊರೋನವೈರಸ್‌ನಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ ಗುರುವಾರ 107ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವಾಲಯ ಗುರುವಾರ ತಿಳಿಸಿದೆ.
ಮಾರಕ ಕಾಯಿಲೆಯ ಸೋಂಕಿಗೊಳಗಾದವರ ಸಂಖ್ಯೆ 3,513ಕ್ಕೆ ಏರಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
Next Story





