ಹೆರಿಗೆ ರಕ್ತಸ್ರಾವದಿಂದ ಮಹಿಳಾ ಪೊಲೀಸ್ ಸಿಬ್ಬಂದಿ ಮೃತ್ಯು
ಮಣಿಪಾಲ, ಮಾ.6: ಕಾರ್ಕಳ ನಗರ ಪೊಲೀಸ್ ಠಾಣೆಯ ಮಹಿಳಾ ಹೆಡ್ ಕಾನ್‌ಸ್ಟೇಬಲ್ ಹೆರಿಗೆ ಸಂದರ್ಭ ಉಂಟಾದ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಮಾ.5ರಂದು ರಾತ್ರಿ 8.45ರ ಸುಮಾರಿಗೆ ನಡೆದಿದೆ.
ಮೃತರನ್ನು ಗಿರಿಧರ್ ಎಂಬವರ ಪತ್ನಿ, ಹೆಡ್‌ಕಾನ್‌ಸ್ಟೇಬಲ್ ಶ್ಯಾಮಲಾ (37) ಎಂದು ಗುರುತಿಸಲಾಗಿದೆ. ಹೆಬ್ರಿ ಸೀತಾನದಿಯ ತಿಮ್ಮಪ್ಪ ಆಚಾರ್ಯ ಎಂಬವರ ಪುತ್ರಿಯಾಗಿರುವ ಇವರು, 2005ರಲ್ಲಿ ಪೊಲೀಸ್ ಸೇವೆಗೆ ಸೇರ್ಪಡೆ ಗೊಂಡಿದ್ದರು. ನಂತರ ಕೋಟ, ಕಾರ್ಕಳ ಗ್ರಾಮಾಂತರ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸಿದ್ದರು. ಕಳೆದ ಏಳೆಂಟು ವರ್ಷಗಳಿಂದ ಕಾರ್ಕಳ ನಗರ ಠಾಣೆಯಲ್ಲಿ ಇರು ಕರ್ತವ್ಯ ನಿರ್ವಹಿಸುತ್ತಿದ್ದರು.
ಹೆರಿಗೆಯ ಹಿನ್ನೆಲೆಯಲ್ಲಿ ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇವರು ಮಾ.5ರಂದು ಮಧ್ಯಾಹ್ನ 3:50ರ ಸುಮಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿ ದ್ದರು. ಹೆರಿಗೆಯ ನಂತರ ತೀವ್ರ ರಕ್ತಸ್ರಾವ ಉಂಟಾದ ಕಾರಣ ಅವರನ್ನು ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸ ಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ ವೇಳೆ ಮೃತಪಟ್ಟರು.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





