ದಿಲ್ಲಿ ಹಿಂಸಾಚಾರ ಬಗ್ಗೆ ಚರ್ಚೆ ನಡೆಸಿದ ಬ್ರಿಟಿಶ್ ಸಂಸತ್ತು

ಲಂಡನ್, ಮಾ. 6: ಇತ್ತೀಚೆಗೆ ನಡೆದ ದಿಲ್ಲಿ ಗಲಭೆ ಬಗ್ಗೆ ಬ್ರಿಟನ್ ಸಂಸತ್ತು ಚರ್ಚೆ ನಡೆಸಿದೆ ಹಾಗೂ ಗಲಭೆಗೆ ಭಾರತ ಸರಕಾರ ಸ್ಪಂದಿಸಿರುವ ರೀತಿಯನ್ನು ಅದು ಖಂಡಿಸಿದೆ.
ದಿಲ್ಲಿ ಗಲಭೆಯಲ್ಲಿ ಈವರೆಗೆ 53 ಮಂದಿ ಮೃತಪಟ್ಟಿದ್ದಾರೆ.
ಬ್ರಿಟಿಶ್ ಸಂಸತ್ತಿನ ಕೆಳಮನೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯ ವೇಳೆ, ಲೇಬರ್ ಪಕ್ಷದ ಸಂಸದ ತನ್‌ಮಂಜೀತ್ ಸಿಂಗ್ ದೇಸಿ ದಿಲ್ಲಿ ಹಿಂಸಾಚಾರವನ್ನು 1984ರ ಸಿಖ್ ವಿರೋಧಿ ಗಲಭೆಗೆ ಹೋಲಿಸಿದ್ದಾರೆ. ಅದು ಹಿಂದಿನ ನೋವಿನ ಘಟನೆಗಳನ್ನು ನೆನಪಿಸಿದೆ ಎಂದು ಅವರು ಹೇಳಿದ್ದಾರೆ. ಗಲಭೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ಇನ್ನೋರ್ವ ಲೇಬರ್ ಪಕ್ಷದ ಸಂಸದರೆ ಯಾಸ್ಮಿನ್ ಖುರೇಶಿ ಕಟು ಮಾತುಗಳಲ್ಲಿ ಭಾರತ ಸರಕಾರ ಹಾಗೂ ಅದರ ವೌನವನ್ನು ಖಂಡಿಸಿದರು.
Next Story





