ಲೈಂಗಿಕ ದೌರ್ಜನ್ಯದಿಂದ ಮೊಮ್ಮಗಳನ್ನು ರಕ್ಷಿಸಿದ ವೃದ್ಧೆಯ ಹತ್ಯೆ

ಕೊಲ್ಕತ್ತಾ: ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ತಡೆಯಲು ಪ್ರಯತ್ನಿಸಿದ 62 ವರ್ಷದ ಮಹಿಳೆಯನ್ನು ಹತ್ಯೆ ಮಾಡಿದ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತಂದೆ ತಾಯಿಯನ್ನು ಕಳೆದುಕೊಂಡ 15 ವರ್ಷದ ಬಾಲಕಿ, ಅಜ್ಜಿ ಜತೆಯಲ್ಲಿದ್ದಳು. ಹಲವು ಬಾರಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರೋಪಿ ಪ್ರಯತ್ನಿಸಿದ್ದ. ಮೊಮ್ಮಗಳನ್ನು ರಕ್ಷಿಸುವ ಸಲುವಾಗಿ ಹೊರಗಿನಿಂದ ಬೀಗ ಜಡಿಯುತ್ತಿದ್ದರು. ಬುಧವಾರ ಆರೋಪಿ ಮನೆಯ ಬೀಗ ಮುರಿದು ಒಳನುಗ್ಗಿದ. ಮಹಿಳೆ ಹೊರಗಿನಿಂದ ಬೀಗ ಹಾಕಿ ನೆರೆಯವರಲ್ಲಿ ಸಹಾಯಕ್ಕೆ ಮೊರೆ ಇಟ್ಟರು. ಈ ವೇಳೆ ಆರೋಪಿ ಮಹಿಳೆಯನ್ನು ಎಳೆದು ಉಸಿರುಗಟ್ಟಿಸಿ ಸಾಯಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.
ಆತ ಕೃತ್ಯ ಎಸಗಿ ಮನೆಗೆ ಮರಳಿದ್ದಾನೆ. ಬಳಿಕ ಸ್ಥಳೀಯರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.
Next Story





