ಜಮ್ಮು-ಕಾಶ್ಮೀರದಲ್ಲಿ ಇಬ್ಬರಿಗೆ ಶಂಕಿತ ಕೊರೋನ ವೈರಸ್ ಸೋಂಕು : ಶಾಲೆಗಳು ಬಂದ್

ಹೊಸದಿಲ್ಲಿ, ಮಾ.7: ಇಬ್ಬರಲ್ಲಿ ಶಂಕಿತ ಕೊರೋನ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಜಮ್ಮು ಹಾಗೂ ಸಾಂಬಾ ಜಿಲ್ಲೆಗಳಲ್ಲಿನ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಸರಕಾರ ಶನಿವಾರ ತಿಳಿಸಿದೆ.
‘‘ಇಬ್ಬರು ಶಂಕಿತ ರೋಗಿಗಳ ಪರೀಕ್ಷಾ ವರದಿಯನ್ನು ಜಮ್ಮುವಿನಿಂದ ಸ್ವೀಕರಿಸಿದ್ದೇವೆ. ಎರಡೂ ಅತ್ಯಂತ ಗಂಭೀರ ವೈರಲ್ ಪ್ರಕರಣವಾಗಿದೆ. ಪರೀಕ್ಷೆಯು ಪಾಸಿಟಿವ್ ಆಗುವ ಸಾಧ್ಯತೆ ಅಧಿಕವಿದೆ’’ ಎಂದು ಹೊಸ ಕೇಂದ್ರಾಡಳಿತ ಪ್ರದೇಶದ ಯೋಜನ ಕಾರ್ಯದರ್ಶಿ ರೋಹಿತ್ ಕನ್ಸಾಲ್ ಶನಿವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಅಮೆರಿಕ ಪ್ರವಾಸಿಗಳು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿ ಭೂತಾನ್‌ಗೆ ತೆರಳಿದ ಬಳಿಕ ಅಸ್ಸಾಂನಲ್ಲಿ ಕನಿಷ್ಠ 127 ಮಂದಿಗೆ ವೈರಲ್ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ಕೊರೋನ ವೈರಸ್ ಭೀತಿಗೆ ಸಂಬಂಧಿಸಿ ಮಾತನಾಡಿದ್ದಾರೆ.
Next Story





