ಯೆಸ್ ಬ್ಯಾಂಕ್‌ಗೆ ಆರ್‌ಬಿಐ ನಿರ್ಬಂಧ ಹೇರುವ ಮೊದಲೇ 265 ಕೋ.ರೂ.ಡ್ರಾ ಮಾಡಿದ್ದ ಗುಜರಾತ್ ಕಂಪೆನಿ

ವಡೋದರ, ಮಾ.7: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ)ಆರ್ಥಿಕ ಸಂಕಷ್ಟದಲ್ಲಿರುವ ಯೆಸ್ ಬ್ಯಾಂಕ್‌ಗೆ ನಿಷೇಧಿತ ಆದೇಶ(ಮೊರಟೋರಿಯಮ್ ಆರ್ಡರ್)ವಿಧಿಸುವ ಎರಡು ದಿನಗಳ ಮೊದಲು ವಡೋದರ ಮಹಾನಗರ ಪಾಲಿಕೆಯ(ವಿಎಂಸಿ) ವಡೋದರ ಸ್ಮಾರ್ಟ್ ಸಿಟಿ ಡೆವಲಪ್‌ಮೆಂಟ್ ಕಂಪೆನಿಯ ವಿಶೇಷ ಉದ್ದೇಶದ ವಾಹನ(ಎಸ್‌ಪಿವಿ) ಯೆಸ್ ಬ್ಯಾಂಕ್‌ನಿಂದ 265 ಕೋ.ರೂ. ಡ್ರಾ ಮಾಡಿಕೊಂಡಿದೆ.
ಗುರುವಾರದಂದು ಆರ್‌ಬಿಐ, ಯೆಸ್ ಬ್ಯಾಂಕ್‌ನ ಪ್ರತಿಯೊಬ್ಬ ಠೇವಣಿದಾರರು 50,000ಕ್ಕಿಂತ ಹೆಚ್ಚು ಹಣವನ್ನು ಹಿಂಪಡೆಯುವಂತಿಲ್ಲ ಎಂದು ನಿರ್ಬಂಧ ಹೇರಿತ್ತು.
‘‘ಸ್ಮಾರ್ಟ್ ಸಿಟಿ ಮಿಶನ್‌ನ ಅಡಿ ಮಂಜೂರಾಗಿರುವ ಹಣವನ್ನು ಕೇಂದ್ರ ಸರಕಾರದಿಂದ ಸ್ವೀಕರಿಸಿದ್ದೆವು. ಅದನ್ನು ಸ್ಥಳೀಯ ಯೆಸ್ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇಟ್ಟಿದ್ದೆವು. ಯೆಸ್ ಬ್ಯಾಂಕ್ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಗಣಿಸಿ ಎರಡು ದಿನಗಳ ಹಿಂದೆಯೇ ಹಣವನ್ನು ಡ್ರಾ ಮಾಡಿಕೊಂಡಿದ್ದೇವೆ. ಬ್ಯಾಂಕ್ ಆಫ್ ಬರೋಡದ ಹೊಸ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದೇವೆ’’ ಎಂದು ಎಸ್‌ಪಿವಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಹಾಗೂ ವಿಎಂಸಿಯ ಉಪ ಆಯುಕ್ತ ಸುಧೀರ್ ಪಟೇಲ್ ತಿಳಿಸಿದ್ದಾರೆ.







