ಮರ್ಸಿಡಿಸ್ ಬೆಂಝ್ ಸುಂದರಂ ಮೋಟರ್ಸ್‌ನಿಂದ ನೂತನ 'ಜಿಎಲ್‌ಸಿ ಕೂಪ್' ಬಿಡುಗಡೆ

ಬೆಂಗಳೂರು : ಇಲ್ಲಿಯ ಕಸ್ತೂರ್ ಬಾ ರೋಡ್‌ನಲ್ಲಿರುವ ಮರ್ಸಿಡಿಸ್-ಬೆಂಝ್ ಸುಂದರಂ ಮೋಟರ್ಸ್‌ನ ಶೋ ರೂಮ್‌ನಲ್ಲಿ ನಡೆದ ‘ರೆಸ್ಟ್‌ಲೆಸ್ ನೈಟ್ಸ್’ಕಾರ್ಯಕ್ರಮದಲ್ಲಿ ನೂತನ ಜಿಎಲ್‌ಸಿ ಕೂಪ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
‘ಮೇಡ್ ಇನ್ ಇಂಡಿಯಾ’ ಜಿಎಲ್‌ಸಿ ಕೂಪ್ 300ಡಿ 4ಮ್ಯಾಟಿಕ್ ಡೀಸಿಲ್ ಮತ್ತು 300 4ಮ್ಯಾಟಿಕ್ ಪೆಟ್ರೋಲ್ ಹೀಗೆ ಎರಡು ಮಾದರಿಗಳಲ್ಲಿ ಲಭ್ಯವಿದೆ.
ಜಿಎಲ್‌ಸಿ 300ಡಿ ಕೂಪ್ ಬಿಎಸ್ 6 ಇನ್-ಲೈನ್ 4 ಸಿಲಿಂಡರ್ ಡೀಸಿಲ್ ಇಂಜಿನ್ 245 ಎಚ್‌ಪಿ ಮತ್ತು 500 ಎನ್‌ಎಂ ಪೀಕ್ ಟಾರ್ಕ್‌ನ್ನು ಉತ್ಪಾದಿಸುತ್ತದೆ ಮತ್ತು 6.6 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ 0-100 ಕಿ.ಮೀ.ವೇಗವನ್ನು ನೀಡುತ್ತದೆ.
ಜಿಎಲ್‌ಸಿ 300 ಕೂಪ್ ಬಿಎಸ್ 6 ಇನ್-ಲೈನ್ ಪೆಟ್ರೋಲ್ ಇಂಜಿನ್ ಹೊಂದಿದ್ದು 258 ಎಚ್‌ಪಿ ಮತ್ತು 370 ಎನ್‌ಎಂ ಟಾರ್ಕ್‌ನ್ನು ಉತ್ಪಾದಿಸುತ್ತದೆ ಮತ್ತು 6.3 ಸೆಕೆಂಡ್‌ಗಳಲ್ಲಿ ಪ್ರತಿ ಗಂಟೆಗೆ 1-100 ಕಿ.ಮೀ.ವೇಗವನ್ನು ನೀಡುತ್ತದೆ.
ಕೇರಳ ಹೊರತುಪಡಿಸಿ ದೇಶದೆಲ್ಲೆಡೆ ಶೋ ರೂಮ್ ಬೆಲೆ ಮರ್ಸಿಡಿಸ್ ಬೆಂಝ್ ಜಿಎಲ್‌ಸಿ 300 4ಮ್ಯಾಟಿಕ್‌ಗೆ 62.70 ಲ.ರೂ. ಮತ್ತು ಜಿಎಲ್‌ಸಿ 300ಡಿ 4ಮ್ಯಾಟಿಕ್‌ಗೆ 63.70 ಲ.ರೂ.ಗಳಾಗಿವೆ.
ಟಿ.ವಿ.ಸುಂದರಂ ಅಯ್ಯಂಗಾರ್ ಆ್ಯಂಡ್ ಸನ್ಸ್‌ನ ವಿಭಾಗವಾಗಿರುವ ಸುಂದರಂ ಮೋಟರ್ಸ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಮರ್ಸಿಡಿಸ್-ಬೆಂಝ್ ಪ್ರಯಾಣಿಕ ಕಾರುಗಳ ಅಧಿಕೃತ ವಿತರಕ ಸಂಸ್ಥೆಯಾಗಿದ್ದು, ಕಳೆದ 60 ವರ್ಷಗಳಿಂದಲೂ ಉದ್ಯಮದಲ್ಲಿದೆ.








