ಉಡುಪಿ ನಗರಸಭೆ: ನೀರು ಸರಬರಾಜು ಸಮಯ ನಿಗದಿ
ಉಡುಪಿ, ಮಾ.7: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನೀರಿನ ಅಭಾವ ಪ್ರಾರಂಭವಾಗಿದ್ದು, ಈ ಬಗ್ಗೆ ನಗರ ವ್ಯಾಪ್ತಿಯನ್ನು ಮೂರು ವಲಯ ಗಳನ್ನಾಗಿ ವಿಂಗಡಿಸಿ, ಪ್ರತಿದಿನ ವಲಯವಾರು ನೀರು ಸರಬರಾಜು ಮಾಡಲು ಸಮಯ ವನ್ನು ನಿಗದಿಪಡಿಸಿ, ಮಾ.10ರಿಂದ ಇದರಂತೆ ನೀರು ಪೂರೈಕೆ ಪ್ರಾರಂಭಿಸಲಾಗುತ್ತದೆ.
ಮೊದಲನೇ ವಲಯದಲ್ಲಿ ಮುಂಜಾನೆ 4 ರಿಂದ ಬೆಳಗ್ಗೆ 10 ರವರೆಗೆ ಕುಕ್ಕಿಕಟ್ಟೆ, ಕಸ್ತೂರ್ಬಾ ನಗರ, ಬೈಲೂರು, ಮಹಿಷಮರ್ಧಿನಿ ನಗರ, ವಾಸುಕಿ ನಗರ, ಬಲಾಯಿಪಾದೆ, ಮಂಚಿ ಮೂಲಸ್ಥಾನ ರಸ್ತೆ, ಚಿಟ್ಪಾಡಿ ಆಯ್ದ ಭಾಗ, ಕಲ್ಯಾಣ ನಗರ, ಭಾಗ್ಯ ಮಂದಿರ, ಬಲ್ಲಾಳ್ ಕಂಪೌಂಡ್, ಡಿಸಿಎಂ ಕಾಲನಿ, ಪಣಿಯಾಡಿ, ಶಾರದ ಮಂಟಪ, ಎಂ.ಜಿ.ಎಂ, ಓಕುಡೇ ಓಣಿ, ಕುಂಜಿಬೆಟ್ಟು, ಕಟ್ಟೆ ಆಚಾರ್ಯ ಮಾರ್ಗದಿಂದ ಕಲ್ಸಂಕದವರೆಗೆ, ಕನ್ನರ್ಪಾಡಿ, ಶೆಟ್ಟಿಗಾರ್ ಕಾಲನಿ, ಕಿನ್ನಿಮುಲ್ಕಿ, ವೇಗಾಸ್ ಲೇಔಟ್, ಬಿ.ಬಿ.ನಗರ, ಮಿಷನ್ ಕಂಪೌಂಡ್, ಬೈಲೂರು ಕೃಷ್ಣ ಭಟ್ ಮನೆ ರಸ್ತೆ, ಪೊಲೀಸ್ ಗ್ರೌಂಡ್, ಶಾಂತಿನಗರ, ಕೊಳಂಬೆ, ಬೀಡಿನಗುಡ್ಡೆ, ವೆಂಕಟರಮಣ ದೇವಸ್ಥಾನ ವಠಾರ, ಭೂತದ ಓಣಿ, ರಥಬೀದಿ, ತೆಂಕಪೇಟೆ, ಒಳಕಾಡು, ಪಿಪಿಸಿ, ಸ್ಟೇಟ್‌ಬ್ಯಾಂಕ್ ಓಣಿ, ತಾಲೂಕು ಕಚೇರಿ ಬಳಿ, ಕೆ.ಎಂ. ಮಾರ್ಗ, ಬನ್ನಂಜೆ, ಮಠದಬೆಟ್ಟು, ಕಲ್ಸಂಕ, ಬಡಗುಪೇಟೆ, ಸಿಟಿ ಬಸ್‌ನಿಲ್ದಾಣ, ಕಾಡಬೆಟ್ಟು, ಶಿರಿಬೀಡು, ಗರಡಿ ರಸ್ತೆ ಬನ್ನಂಜೆ, ಎಸ್.ಸಿ ಕಾಲೋನಿ, ಅಜ್ಜರಕಾಡು, ಪಿಡಬ್ಲುಡಿ ಕ್ವಾಟ್ರಸ್, ಡಿ.ಸಿ ಮನೆ ವಠಾರ, ಸರ್ವೀಸ್ ಬಸ್‌ನಿಲ್ದಾಣ, ರಾಜಾಂಗಣ, ವಾದಿರಾಜರೋಡ್, ಕೊಡಂಕೂರು, ನ್ಯೂ ಕೊಡಂಕೂರು, ಸಾಯಿಬಾಬಾ ನಗರ, ಮೂಡಬೆಟ್ಟು, ಆದಿ ಉಡುಪಿ, ಮುಖ್ಯಪ್ರಾಣ ನಗರ, ನಾಗೇಶ್ ನಗರ, ಕುದ್ಮಲ್ ರಂಗರಾವ್ ನಗರ, ಕರಾವಳಿ ಬೈಪಾಸ್, ಅಂಬಲಪಾಡಿ, ರಾಜೀವನಗರಗಳಿಗೆ ನೀರು ಸರಬರಾಜು ಮಾಡಲಾಗುವುದು.
ಎರಡನೇ ವಲಯದಲ್ಲಿ ಅಪರಾಹ್ನ 12ರಿಂದ ಸಂಜೆ 6ರವರೆಗೆ ದೊಡ್ಡಣ ಗುಡ್ಡೆ, ಕರಂಬಳ್ಳಿ, ಜನತಾ ಕಾಲೋನಿ, ನೇಕಾರರ ಕಾಲೋನಿ, ವಿ.ಎಂ ನಗರ ರೈಲ್ವೇ ಸೇತುವೆವರೆಗೆ, ಪೊಲೀಸ್ ಕ್ವಾಟ್ರಾಸ್, ಚಕ್ರತೀರ್ಥ, ಪಾಡಿಗಾರು ಮಠ, ಗುಂಡಿಬೈಲು ಶಾಲಾ ವಠಾರ, ಕಲ್ಸಂಕ ಗುಂಡಿಬೈಲು ರೋಡ್, ಅಡ್ಕದಕಟ್ಟೆ, ನಿಟ್ಟೂರು, ವಿಷ್ಣುಮೂರ್ತಿ ನಗರ, ಕಡಿಯಾಳಿ, ಕೆ.ಇ.ಬಿ ಕ್ವಾಟ್ರಸ್, ಕಾತ್ಯಾಯನಿ ನಗರ, ಎಂ.ಜಿ.ಎಂ ಕ್ವಾಟ್ರಸ್, ಸಗ್ರಿ ರೆಲ್ವೆ ಸೇತುವೆವರೆಗೆ, ಸುಬ್ರಮಣ್ಯನಗರ, ಲಕ್ಷ್ಮೀನಗರ, ಲಕ್ಷ್ಮೀನಗರ ಗರ್ಡೆ, ಲಕ್ಷ್ಮಿಕಾಫಿ ಬಳಿ, ಗೋಪಾಲಪುರ, ನಯಂಪಳ್ಳಿ, ಸಂತೆಕಟ್ಟೆ, ಅಂಬಾಗಿಲು, ಕಕ್ಕುಂಜೆ, ಪ್ರಭಾಕರ್ ಲೇಔಟ್, ಕುದುರೆ ಕಲ್ಸಂಕದ ವರೆಗೆ, ನಿಟ್ಟೂರು ಶಾಲೆ ಬಳಿ, ಹನುಮಂತ ನಗರ, ಪಾಳೆಕಟ್ಟೆ, ಮೂಡುಬೆಟ್ಟು ಚನ್ನಂಗಡಿ, ಹೆಬ್ಬಾರ್ ರಸ್ತೆ, ಕಾನಂಗಿ ಕೊಡವೂರು ಮೂಡುಬೆಟ್ಟು ರಸ್ತೆ, ಕೊಡವೂರು, ಬಾಪು ತೋಟ, ಸಸಿತೋಟ, ಮಲ್ಪೆ ಸೆಂಟ್ರಲ್, ಕೊಳ, ನೇರ್ಗಿ, ವಡಪಾಂಡೇಶ್ವರ, ಮಲ್ಪೆ ಬೀಚ್, ತೊಟ್ಟಂ, ಕಲ್ಮಾಡಿ, ಬಂಕೇರ ಕಟ್ಟ ಪಡುಕೆರೆ, ಶಾಂತಿನಗರ, ಕಲ್ಮಾಡಿ ಚರ್ಚ್ ಹಿಂಬದಿ, ತ್ರಿಶಂಕು ನಗರ, ಪವಿತ್ರ ನಗರ ಗಳಿಗೆ ನೀರು ಸರಬರಾಜು ಮಾಡಲಾಗುವುದು.
ಮೂರನೇ ವಲಯದಲ್ಲಿ ರಾತ್ರಿ 8ರಿಂದ ಮಧ್ಯರಾತ್ರಿ 2 ಗಂಟೆಯವರೆಗೆ ಅನಂತನಗರ ಪಸ್ಟ್ ಆ್ಯಂಡ್ ಸೆಕೆಂಡ್ ಸ್ಟೇಜ್, ಹುಡ್ಕೋ, ಎಂಐಟಿ, ಎಲ್‌ಐಜಿ, ಇಂಡಸ್ಟ್ರೀಯಲ್ ಏರಿಯಾ, ಮಂಚಿ ಕುಮೇರಿ, ಮಂಚಿ ದುಗ್ಲಿ, ಮಂಜುಶ್ರೀ ನಗರ, ಮಂಚಿ ಕೋಡಿ, ದುರ್ಗಾ ನಗರ, ಅನಂತಕಲ್ಯಾಣ ನಗರ, ಈಶ್ವರ ನಗರ, ನೆಹರೂನಗರ, ಸರಳೇಬೆಟ್ಟು, ಕೊಂಡಂಗೆ, ನರಸಿಂಗೆ, ವಿವೇಕಾನಂದ ನಗರ, ಶೇಷಾದ್ರಿ ನಗರ, ವಿಜಯನಗರ, ಮಣಿಪಾಲ ಸಿಟಿ, ವಿದ್ಯಾರತ್ನ ನಗರ, ಶೀಮ್ರಾ, ಡಿ.ಸಿ ಕಚೇರಿವರೆಗೆ, ಪರ್ಕಳ, ಸಣ್ಣಕ್ಕಿ ಬೆಟ್ಟು, ಹೆರ್ಗಾ, ಸೆಟ್ಟಿಬೆಟ್ಟು, ಹೆರ್ಗ ದೇವಸ್ಥಾನ ರಸ್ತೆ, ದೇವಿನಗರ, ಮಂಜುನಾಥ ನಗರ, ಪರೀಕ ರಸ್ತೆ, ಕೋಡಂಗೆ, ಉಮಾಮಹೇಶ್ವರ ದೇವಸ್ಥಾನ ರಸ್ತೆ, ವಿ.ಪಿ ನಗರ, ಇಂದ್ರಾಳಿ, ಗುಳ್ಮೆ, ರೈಲ್ವೆ ಗೋಡಾನ್ ರೋಡ್, ರುದ್ರಪ್ರಿಯ ನಗರ, ಮಂಚಿ ಶಾಲೆ ರಸ್ತೆ, ಹಯಗ್ರೀವನಗರ, ಲಕ್ಷ್ಮೀಂದ್ರನಗರ, ಸಗ್ರಿ, ಪೆರಂಪಳ್ಳಿ, ಅಂಬಡೆಬೆಟ್ಟು, ವಿ.ಎಂ.ನಗರ, ದೊಡ್ಡಣಗುಡ್ಡೆ ರೈಲ್ವೆ ಸೇತುವೆವರೆಗೆ, ಪೆರಂಪಳ್ಳಿ ರೈಲ್ವೆ ಸೇತುವೆವರೆಗೆ, ಆದಿಪರಾಶಕ್ತಿ ದೇವಸ್ಥಾನ ರಸ್ತೆ, ಪತ್ರಕರ್ತರ ಕಾಲನಿ ಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ನಗರಸಬೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.







