ದ್ವಿತೀಯ ಪಿಯುಸಿ ಪರೀಕ್ಷೆ: 171 ಮಂದಿ ಗೈರು
ಉಡುಪಿ, ಮಾ.7: ಶನಿವಾರ ನಡೆದ ದ್ವಿತೀಯ ಪಿಯುಸಿಯ ಮೂರು ವಿಷಯಗಳ ಪರೀಕ್ಷೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 171 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಪರೀಕ್ಷೆ ಶಾಂತಿಯುತವಾಗಿ ಯಾವುದೇ ಅಕ್ರಮಗಳಿಲ್ಲದೇ ನಡೆದಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ.
ರಸಾಯನ ಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡ 4965 ವಿದ್ಯಾರ್ಥಿಗಳಲ್ಲಿ 4944 ಮಂದಿ ಹಾಜರಾಗಿ 21 ಮಂದಿ ಗೈರುಹಾಜ ರಾದರೆ, ಬ್ಯುಸಿನೆಸ್ ಸ್ಟಡೀಸ್ ವಿಷಯಕ್ಕೆ ನೊಂದಾಯಿತ 8087 ಮಂದಿಯಲ್ಲಿ 7993 ಮಂದಿ ಪರೀಕ್ಷೆ ಬರೆದು 94 ಮಂದಿ ಹಾಗೂ ಸೋಷಿಯಾ ಲಜಿ ವಿಷಯದಲ್ಲಿ ನೊಂದಾಯಿತ 1685 ಮಂದಿಯಲ್ಲಿ 1629 ಮಂದಿ ಹಾಜರಾಗಿ 56 ಮಂದಿ ಗೈರುಹಾಜರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಸೋಮವಾರ ಮಾ.9ರಂದು ಇನ್‌ಫಾರ್ಮೆಷನ್ ಟೆಕ್ನಾಲಜಿ ಹಾಗೂ ಅಟೋಮೊಬೈಲ್ ಪರೀಕ್ಷೆಗಳು ನಡೆಯಲಿವೆ.
Next Story





