ಜಪ್ಪಿನಮೊಗರು ಪ್ರತಿಭಟನೆ: ವಾಹನ ಸಂಚಾರ ರಸ್ತೆ ಮಾರ್ಪಾಡು
ಮಂಗಳೂರು, ಮಾ.7: ಪೌರ ಸಮನ್ವಯ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಮಾ.8ರಂದು ರಾ.ಹೆ.66ರ ಜಪ್ಪಿನಮೊಗರುವಿನಲ್ಲಿ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ನಡೆಯುವ ಪ್ರತಿಭಟನೆಯ ಹಿನ್ನಲೆಯಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಿ ಪೊಲೀಸ್ ಇಲಾಖೆಯು ಆದೇಶ ಹೊರಡಿಸಿದೆ.
ಮಾ.8ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ರಾ.ಹೆ.66ರಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ತಲಪಾಡಿಯಿಂದ ತೊಕ್ಕೊಟ್ಟು ಮಾರ್ಗವಾಗಿ ಬರುವ ವಾಹನಗಳು ತೊಕ್ಕೊಟ್ಟು ಜಂಕ್ಷನ್-ಸರ್ವಿಸ್ ರಸ್ತೆಯಾಗಿ ಕುತ್ತಾರ್, ದೇರಳಕಟ್ಟೆ, ಮುಡಿಪು, ಮೆಲ್ಕಾರ್, ಬಿಸಿ ರೋಡ್, ಅಡ್ಯಾರ್ ಕಣ್ಣೂರು, ಪಡೀಲ್ ಮೂಲಕ ಪಂಪ್‌ವೆಲ್ ತಲುಪುವುದು. ತಲಪಾಡಿಯಿಂದ ಬರುವ ವಾಹನಗಳು ಕೋಟೆಕಾರ್-ಮಾಡೂರು ಮೂಲಕ ದೇರಳಕಟ್ಟೆ, ಮುಡಿಪು ರಸ್ತೆಯಾಗಿ ಸಂಚರಿಸಬಹುದಾಗಿದೆ. ಅದೇ ರೀತಿ ನಂತೂರು, ಪಂಪ್‌ವೆಲ್‌ನಿಂದಾಗಿ ಹೋಗುವ ವಾಹನಗಳು ಪಡೀಲ್, ಅಡ್ಯಾರ್ ಕಣ್ಣೂರು, ಬಿಸಿ ರೋಡ್, ಮೆಲ್ಕಾರ್, ಮುಡಿಪು, ದೇರಳಕಟ್ಟೆಯಾಗಿ ತೊಕ್ಕೊಟ್ಟು, ತಲಪಾಡಿ ತಲುಪಬಹುದು.
ಉಳ್ಳಾಲ ಜಂಕ್ಷನ್-ಮೇಲ್ಸೇತುವೆ ರಸ್ತೆಯನ್ನು ಈ ಅವಧಿಯಲ್ಲಿ ಮುಚ್ಚಲಾಗುವುದು. ಮಂಗಳಾದೇವಿ-ಮಹಾಕಾಳಿಪಡ್ಪು ರಸ್ತೆಯಲ್ಲೂ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ವಾಹನಗಳ ಪಾರ್ಕಿಂಗ್
ಉಳ್ಳಾಲ-ತೊಕ್ಕೊಟ್ಟು ಕಡೆಯಿಂದ ಜಪ್ಪಿನಮೊಗರಿಗೆ ಬರುವ ನಾಲ್ಕು ಚಕ್ರದ ವಾಹನಗಳು ಎಂಎಎಸ್ ಕ್ಯಾಟರ್ಸ್ ಗ್ರೌಂಡ್‌ನಲ್ಲಿ ಮತ್ತು ಬಸ್‌ಗಳು ಮಲಬಾರ್‌ನ 1 ಮತ್ತು 2ನೆ ಗ್ರೌಂಡ್‌ನಲ್ಲಿ ನಿಲ್ಲಿಸಬಹುದಾಗಿದೆ.
ಪಂಪ್‌ವೆಲ್ ಕಡೆಯಿಂದ ಜಪ್ಪಿನಮೊಗರಿಗೆ ತೆರಳುವ ನಾಲ್ಕು ಚಕ್ರದ ವಾಹನಗಳು ಪ್ರೆಸ್ಟೀಜ್ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಬಸ್‌ಗಳು ಯೆನೆಪೊಯ ಸ್ಕೂಲ್ ಗ್ರೌಂಡ್‌ನಲ್ಲಿ ನಿಲ್ಲಿಸಬಹುದಾಗಿದೆ.







