ಮಾ.22ರಂದು ಮಂಗಳೂರಿನಲ್ಲಿ ಬ್ಯಾರಿ ಅಕಾಡೆಮಿ ವತಿಯಿಂದ ಮೆಹಂದಿ ಸ್ಪರ್ಧೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.7: ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯು ಸಾರ್ವಜನಿಕರಿಗಾಗಿ ಮೆಹಂದಿ ಸ್ಪರ್ಧೆಯನ್ನು ಮಾ.22ರಂದು ಮಂಗಳೂರಿನಲ್ಲಿ ನಡೆಸಲಿದೆ. ಆಸಕ್ತರು ತಮ್ಮ ಹೆಸರನ್ನು ಮಾ.20ರೊಳಗೆ ನೋಂದಾಯಿಸಿಕೊಳ್ಳಬೇಕು.
ಸ್ಪರ್ಧೆಯು 2 ವಿಭಾಗಗಳಲ್ಲಿ ನಡೆಯಲಿದೆ. ಕಿರಿಯರ ವಿಭಾಗ (15ರಿಂದ 20 ವರ್ಷದೊಳಗೆ) ಮತ್ತು ಹಿರಿಯರ ವಿಭಾಗ (20 ವರ್ಷ ಮೇಲ್ಪಟ್ಟು), ವಯೋಮಿತಿ ದಾಖಲಾತಿಗಾಗಿ ಗುರುತಿನ ಚೀಟಿ ನೀಡುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರು ಸ್ವತಃ ತಮ್ಮ ಕೈಯಲ್ಲೆ ಮೆಹಂದಿ ಬಿಡಿಸಬೇಕು ಅಥವಾ ಒಬ್ಬ ಸಹಾಯಕರನ್ನು ಕರೆದುಕೊಂಡು ಬರಬಹುದು.
ಮೊದಲು ನೋಂದಾಯಿಸಿದ 100 ಮಂದಿ ಸ್ಪರ್ಧಾಳುಗಳಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ. ಸ್ಪರ್ಧೆಯ ವಿಜೇತರಿಗೆ 2 ವಿಭಾಗಗಳಲ್ಲಿಯೂ ತಲಾ ಪ್ರಥಮ ಬಹುಮಾನ 5000 ರೂ.ಗಳು, ದ್ವಿತೀಯ 3000 ರೂ.ಗಳು ಹಾಗೂ ತೃತೀಯ 1000 ರೂ.ಗಳು ಹಾಗೂ ಒಂದು ಸಮಾಧಾನಕರ ಬಹುಮಾನ 500ರೂ.ಗಳನ್ನು ನೀಡಲಾಗುವುದು.
ಮಾ.22ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 4.30ವರೆಗೆ ಸ್ಪರ್ಧೆ ನಡೆಯಲಿದೆ. ಆಸಕ್ತರು ದೂರವಾಣಿ ಮುಖಾಂತರ ಹೆಸರನ್ನು ನೋಂದಾಯಿಸಬಹುದು. ಮಾ.22ರಂದು ಸಂಜೆ 5 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಮತ್ತು ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 74839 46578 ಅಥವಾ 97433 62663ಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







