ಮಾ.9 : ಪವರ್‌ನಿಂದ ‘ಎಂಪವರ್-2020’ ಮಹಿಳಾ ದಿನಾಚರಣೆ
ಉಡುಪಿ, ಮಾ.7: ಉಡುಪಿ ಜಿಲ್ಲೆಯ ಮಹಿಳಾ ಉದ್ಯಮಿದಾರರ ವೇದಿಕೆ (ಪವರ್)ಯ ವತಿಯಿಂದ ಪವರ್‌ನ ವಾರ್ಷಿಕ ದಿನಾಚರಣೆ ಹಾಗೂ ವಿಶ್ವ ಮಹಿಳಾ ದಿನಾಚರಣೆ ಮಾ.9ರ ಸಂಜೆ 5:30ಕ್ಕೆ ಉಡುಪಿಯ ಲೆಗಾಡೋ ಹೊಟೇಲ್‌ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಶ್ರುತಿ ಜಿ.ಶೆಣೈ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹಾಗೂ ಬೆಂಗಳೂರಿನ ಮಹಿಳಾ ಉದ್ಯಮಿ ಮತ್ತು ಪರಿಸರವಾದಿ ರೇವತಿ ಕಾಮತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ 2020-2021ನೇ ಸಾಲಿನ ಪವರ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವೂ ನಡೆಯಲಿದೆ. ಪುಷ್ಪ ಜಿ.ರಾವ್ ಅಧ್ಯಕ್ಷರಾಗಿ, ಸುವರ್ಶ ಮಿನ್ಜ್ ಕಾರ್ಯದರ್ಶಿಯಾಗಿ, ತಾರಾ ತಿಮ್ಮಯ್ಯ ಉಪಾಧ್ಯಕ್ಷೆ, ಸುಗುಣ ಎಸ್.ಸುವರ್ಣ ಖಜಾಂಚಿ ಹಾಗೂ ಸವಿತಾ ತೋಳಾರ್ ಜಂಟಿ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷೆ ರೇಣು ಜಯರಾಮ್, ಅಲ್ಲದೇ ಪುಷ್ಪಾ ಜಿ.ರಾವ್, ಸುವರ್ಶ ಮಿನ್ಜ್, ಸುುಣಾ ಎಸ್.ಸುವರ್ಣ ಉಪಸ್ಥಿತರಿದ್ದರು







