ಜಾನುವಾರು ಕಳವು: ಆರೋಪಿ ಬಂಧನ
ಗಂಗೊಳ್ಳಿ, ಮಾ.7: ಮೇಯಲು ಬಿಟ್ಟ ಜಾನುವಾರು ಕಳವು ಮಾಡಿ ಮಾಂಸ ಮಾಡುತ್ತಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಮಾ.6ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಹಕ್ಲಾಡಿ ಗ್ರಾಮದ ಕೆಳಾಕಳಿಯ ನಿವಾಸಿ ಲಿಯೊ ಡಿ ಅಲ್ಮೇಡಾ ಬಂಧಿತ ಆರೋಪಿ. ಹೊಸಾಡು ಗ್ರಾಮದ ಅರಾಟೆಯ ನಾಗರಾಜ ಎಂಬವರು ಮೇಯಲು ಬಿಟ್ಟಿದ್ದ ಜಾನುವಾರುವನ್ನು ಸಂಜೆ ವೇಳೆ ಕಳವು ಮಾಡಿದ ಲಿಯೋ, ಹೊಸದಾಗಿ ಕಟ್ಟುತ್ತಿದ್ದ ತನ್ನ ಮನೆಯ ಕೋಣೆಯಲ್ಲಿ ಕಡಿದು ಮಾಂಸ ಮಾಡುತ್ತಿದ್ದ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಳವಾದ ಜಾನುವಾರು ವೌಲ್ಯ 5000ರೂ. ಅಂದಾಜಿಸ ಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





