ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಬೈಂದೂರು, ಮಾ.7: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ಮಾ.6ರಂದು ಮಧ್ಯಾಹ್ನ ವೇಳೆ ಗಿಡಗಳಿಗೆ ಹಾಕುವ ಕೀಟನಾಶಕ ವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಿಜೂರು ಗ್ರಾಮದ ನಾರಂಬಳ್ಳಿ ನಿವಾಸಿ ತೇಜ ಭಂಡಾರಿ(68) ಎಂಬವರು ಮಾ.7ರಂದು ಬೆಳಗಿನ ಜಾವ 5.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಆನಗಳ್ಳಿ ಗ್ರಾಮದ ಕಾಮನಮನೆ ನಿವಾಸಿ ಭಾಸ್ಕರ ಪೂಜಾರಿ ಎಂಬವರ ಪತ್ನಿ ಸುಶೀಲ(42) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಮಾ.7ರಂದು ಬೆಳಗ್ಗೆ ಮನೆಯ ಪ್ಯಾಸೇಜಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





