ಕಾರಿನಲ್ಲಿದ್ದ 2 ಲಕ್ಷ ರೂ. ಹಣ ದೋಚಿ ಪರಾರಿ
ಕಾರ್ಕಳ, ಮಾ.7: ಓಮ್ನಿ ಕಾರಿನಲ್ಲಿದ್ದ ಎರಡು ಲಕ್ಷ ರೂ. ಹಣವನ್ನು ಬೈಕಿನಲ್ಲಿ ಬಂದ ಅಪರಿಚಿತರಿಬ್ಬರು ಕಳವು ಮಾಡಿ ಪರಾರಿಯಾಗಿರುವ ಘಟನೆ ಮಾ.7ರಂದು ಮಧ್ಯಾಹ್ನ 12ಗಂಟೆ ಸುಮಾರಿಗೆ ಕಾಬೆಟ್ಟು ಜಂಕ್ಷನ್ ಬಳಿ ನಡೆದಿದೆ.
ಅತ್ತೂರು ಗುಂಡ್ಯಡ್ಕ ನಿವಾಸಿ ಮಾಲಿನಿ ಕೆ. ಎಂಬವರಿಗೆ ಸಂಬಂಧಿಸಿದ ಮಾರುತಿ ಓಮ್ನಿ ಕಾರನ್ನು ಕಾಬೆಟ್ಟುವಿನ ಮಂಜುನಾಥ ಪ್ರಭು ಎಂಬವರ ಅಂಗಡಿ ಎದುರು ನಿಲ್ಲಿಸಲಾಗಿತ್ತು. ಕಾರಿನ ಮಧ್ಯದ ಸೀಟಿನ ಪ್ಲಾಸ್ಟಿಕ್ ಕವರಿನಲ್ಲಿ ಇರಿಸಿದ್ದ 2 ಲಕ್ಷ ರೂ. ಹಣವನ್ನು ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ತೆರೆದಿದ್ದ ಕಿಟಕಿಯ ಮೂಲಕ ಕಳವು ಮಾಡಿಕೊಂಡು ಪರಾರಿಯಾದರು ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





