ಚೀನಾ: ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 3,070ಕ್ಕೆ

ಬೀಜಿಂಗ್, ಮಾ. 7: ನೂತನ-ಕೊರೋನವೈರಸ್ ಕಾಯಿಲೆಯಿಂದಾಗಿ ಹೊಸದಾಗಿ 28 ಸಾವುಗಳು ಸಂಭವಿಸಿವೆ ಎಂದು ಚೀನಾ ಶನಿವಾರ ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಈ ಮಾರಕ ಕಾಯಿಲೆಯಿಂದಾಗಿ ಸಂಭವಿಸಿದ ಸಾವಿನ ಸಂಖ್ಯೆ 3,070ಕ್ಕೆ ಏರಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಹೊಸದಾಗಿ 99 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಚೀನಾದ ಕೊರೋನವೈರಸ್ ಸೋಂಕಿನ ಕೇಂದ್ರ ಬಿಂದುವಾಗಿರುವ ಹುಬೈ ಪ್ರಾಂತದಿಂದ ಹೊರಗೆ ವರದಿಯಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹುಬೈಯಿಂದ ಹೊರಗೆ 25 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ.
Next Story





