ಬಿಪಿಸಿಎಲ್‌ನ ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ಸರಕಾರದ ಶೇರುಗಳ ಮಾರಾಟಕ್ಕೆ ಬಿಡ್ ಆಹ್ವಾನ
ಹೊಸದಿಲ್ಲಿ,ಮಾ.8: ದೇಶದ ಅತಿ ದೊಡ್ಡ ಖಾಸಗೀಕರಣ ಅಭಿಯಾನಕ್ಕೆ ಮುಂದಾಗಿರುವ ಕೇಂದ್ರ ಸರಕಾರವು ದೇಶದ ಅತಿ ದೊಡ್ಡ ತೈಲ ಸಂಸ್ಕರಣಾಸಂಸ್ಥೆ ಯಾದ ಭಾರತ್ ಪೆಟ್ರೋಲಿಂಯ ಕಾರ್ಪೊರೇಶನ್ (ಬಿಪಿಸಿಎಲ್)ನ ಶೇಕಡಾ 52.98 ಶೇಕಡಾ ಶೇರುಗಳ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಿದೆ.
ಆಸಕ್ತ ಬಿಡ್ ದಾರರು ಮೇ 2ರೊಳಗೆ ತಮ್ಮ ಬಿಡ್ ಗಳನ್ನು ಸಲ್ಲಿಸುವಂತೆ ಅದು ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಬಿಡ್ ದಸ್ತಾವೇಜಿನಲ್ಲಿ ತಿಳಿಸಲಾಗಿದೆ.
‘‘ ಭಾರತ ಸರಕಾರವು 114.91 ಕೋಟಿ ರೂ.ಮೌಲ್ಯದ ಈಕ್ವಿಟಿ ಶೇರುಗಳನ್ನು ಒಳಗೊಂಡ ಬಿಪಿಸಿಎಲ್‌ನಲ್ಲಿರುವ ತನ್ನ ಎಲ್ಲಾ ಶೇರುಗಳ ಹೂಡಿಕೆಯನ್ನು ಹಿಂತೆಗೆದುಕೊಳ್ಲುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಮಾಡಿದೆ. ಬಿಪಿಸಿಎನ 52.98 ಶೇಕಡ ಈಕ್ವಿಟಿ ಶೇರುಗಳು ಇದರಲ್ಲಿ ಒಳಗೊಂಡಿವೆ.
ಈ ಬಿಡ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರಂಗದ ಸಂಸ್ಥೆಗಳು ಪಾಲ್ಗೊಳ್ಳುವುದಕ್ಕೆ ಅವಕಾಶವಿಲ್ಲವೆಂದು ಬಿಡ್ ದಸ್ತಾವೇಜಿನಲ್ಲಿ ತಿಳಿಸಲಾಗಿದೆ. 10 ಶತಕೋಟಿ ಡಾಲರ್ ಮೌಲ್ಯದ ಯಾವುದೇ ಖಾಸಗಿ ಕಂಪೆನಿಯು ಬಿಡ್ಡಿಂಗ್‌ನಲ್ಲಿ ಭಾಗವಹಿಸಲು ಅರ್ಹತೆಯನ್ನು ಹೊಂದಿದೆ. ಆದರೆ ನಾಲ್ಕಕ್ಕಿಂತ ಅಧಿಕ ಕಂಪೆನಿಗಳನ್ನು ಹೊಂದಿರುವ ಉದ್ಯಮ ಒಕ್ಕೂಟಗಳು ಬಿಡ್‌ಗೆ ಭಾಗವಹಿಸಲು ಅವಕಾಶವಿಲ್ಲವೆಂದು ಎಂದು ಅದು ಹೇಳಿದೆ.
ದೇಶಾದ್ಯಂತ ಬಿಪಿಸಿಎಲ್ 15,177 ಪೆಟ್ರೋಲ್ ಪಂಪ್‌ಗಳು ಹಾಗೂ 6011 ಎಲ್‌ಪಿಜಿ ವಿತರಣಾ ಏಜೆನ್ಸಿಗಳ ಒಡೆತನವನ್ನು ಬಿಪಿಸಿಎಲ್ ಹೊಂದಿದೆ. ಇದರ ಜತೆಗೆ ಅದು 51 ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರಗಳನ್ನು ಹೊಂದಿದೆ.







