ಜಂಇಯ್ಯತುಲ್ ಫಲಹಾ ಕಾರ್ಕಳ ಘಟಕದಿಂದ ಉಚಿತ ಕಣ್ಣಿನ ಪರೀಕ್ಷೆ, ಚಿಕಿತ್ಸೆ

ಕಾರ್ಕಳ : ಜಂಇಯ್ಯತುಲ್ ಫಲಹಾ ಕಾರ್ಕಳ ಘಟಕದಿಂದ ನೇತ್ರ ಐ ಕೇರ್ ಸೆಂಟರ್ ನಲ್ಲಿ ಸುಮಾರು 30 ಮಂದಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಡಾ. ವಿಗ್ನೇಶ್ ಶೇನೋಯ್ ನೀಡಿದರು.
ಈ ಸಂದರ್ಭ ಮಾತನಾಡಿದ ಘಟಕದ ಅಧ್ಯಕ್ಷ ಯಾಕೂಬ್ ಸಾಹೇಬ್ ಜಂಇಯ್ಯತುಲ್ ಫಲಹಾ ಕಾರ್ಕಳದಲ್ಲಿ ಹಲವು ವರ್ಷಗಳಿಂದ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಶಿಕ್ಷಣಕ್ಕೆ ತುಂಬಾ ಮಹತ್ವವನ್ನು ಕೊಡುತ್ತಿದೆ. ಇಂದು ನಾವು ಉಚಿತ ಕಣ್ಣಿನ ತಪಾಸಣೆಯನ್ನು ಹಾಗೂ ಚಿಕಿತ್ಸೆಯ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಈ ಸಂದರ್ಭ ಘಟಕದ ಕಾರ್ಯದರ್ಶಿ ಸೈಯದ್ ಹಸ್ಸನ್, ಹಾಜಿ ಸೈಯದ್ ಅಬ್ಬಾಸ್, ನಾಸಿರ್ ಖಾನ್ ಪತ್ರಿಕಾ ಕಾರ್ಯದರ್ಶಿ ಕೆ. ಯಂ. ಕಲೀಲ್ ಹಾಗೂ ನಾಸಿರ್ ಶೇಕ್ ಇನ್ನಿತರ ಸಂಘದ ಸದಸ್ಯರು ಉಪಸ್ಥಿತರಿದ್ದರು.
Next Story





