2021ರ ಜನವರಿಯಿಂದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಬ್ಯಾಗ್‌ಗಳು ಕಡ್ಡಾಯ

ಪುಣೆ,ಮಾ.8: ಕೇಂದ್ರ ಸರಕಾರವು ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕೆ ಕಂಪನಿಗಳು ಜೈವಿಕ ವಿಘಟನೀಯ ವಿಲೇವಾರಿ ಬ್ಯಾಗ್‌ಗಳನ್ನು ಒದಗಿಸುವುದನ್ನು ಜನವರಿ, 2021ರಿಂದ ಕಡ್ಡಾಯಗೊಳಿಸಲಿದೆ ಎಂದು ಕೇಂದ್ರ ಪರಿಸರ,ಅರಣ್ಯ ಮತ್ತು ಹವಾಮಾನ ಸಚಿವ ಪ್ರಕಾಶ ಜಾವಡೇಕರ್ ಅವರು ರವಿವಾರ ಇಲ್ಲಿ ತಿಳಿಸಿದರು.
ತ್ಯಾಜ್ಯ ಸಂಗ್ರಹಕಾರರು ಭಾಗವಹಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಸ್ಯಾನಿಟರಿ ಪ್ಯಾಡ್‌ಗಳೊಂದಿಗೆ ಕೊಳೆಯಬಲ್ಲ ವಿಲೇವಾರಿ ಚೀಲಗಳನ್ನೂ ಒದಗಿಸುವಂತೆ ಕಂಪನಿಗಳಿಗೆ ಪದೇಪದೇ ಮನವಿ ಮಾಡಿಕೊಂಡಿದ್ದರೂ ಅವು ಕಡೆಗಣಿಸಿವೆ. ಕೇಂದ್ರವು ಜ.2021ರಿಂದ ಇಂತಹ ಚೀಲಗಳನ್ನು ಕಡ್ಡಾಯಗೊಳಿಸಲಿದೆ ಎಂದರು.
ನಗರಸಭಾ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸ್ವಚ್ಛತಾ ನಿಯಮಗಳು ಈಗ 3,000ಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೂ ಅನ್ವಯಿಸಲಿದೆ ಎಂದೂ ಸಚಿವರು ತಿಳಿಸಿದರು.
Next Story





