Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ದೆಹಲಿಯಲ್ಲಿ ನಡೆದದ್ದು ಗುಜರಾತ್ ಮಾದರಿ...

ದೆಹಲಿಯಲ್ಲಿ ನಡೆದದ್ದು ಗುಜರಾತ್ ಮಾದರಿ ಗಲಭೆ: ಸ್ವಾಮಿ ಅಗ್ನಿವೇಶ್

ಜಪ್ಪಿನಮೊಗರುನಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಪೌರತ್ವ ಸಂರಕ್ಷಣಾ ಸಮಾವೇಶ

ವಾರ್ತಾಭಾರತಿವಾರ್ತಾಭಾರತಿ8 March 2020 9:09 PM IST
share
ದೆಹಲಿಯಲ್ಲಿ ನಡೆದದ್ದು ಗುಜರಾತ್ ಮಾದರಿ ಗಲಭೆ: ಸ್ವಾಮಿ ಅಗ್ನಿವೇಶ್

ಮಂಗಳೂರು, ಮಾ.8: ನರೇಂದ್ರ ಮೋದಿ 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲೇ ಕೋಮು ಗಲಭೆ ನಡೆದಿತ್ತು. ಅಂದು ಪೊಲೀಸರನ್ನು ತಡೆದಂತೆ ಇತ್ತೀಚೆಗೆ ದೆಹಲಿಯಲ್ಲಿ ಗಲಭೆ ನಡೆದಾಗ ಅಮಿತ್ ಶಾ ಪೊಲೀಸರನ್ನು ತಡೆಯುವ ಮೂಲಕ ಗಲಭೆಗೆ ಬೆಂಬಲ ನೀಡಿದ್ದಾರೆ. ಆ ಮೂಲಕ ಗುಜರಾತ್ ಮಾದರಿಯಲ್ಲೇ ದೆಹಲಿಯಲ್ಲಿ ಹಿಂಸಾಚಾರ ನಡೆದಿದೆ ಎಂದು ಹರ್ಯಾಣದ ಮಾಜಿ ಶಾಸಕ, ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಹೇಳಿದರು.

ಕೇಂದ್ರ ಸರಕಾರವು ಜಾರಿಗೆ ತಂದಿರುವ ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹಾಗೂ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಖಂಡಿಸಿ ‘ಪೌರ ಸಮನ್ವಯ ಸಮಿತಿ ದ.ಕ.ಜಿಲ್ಲೆ’ ಇದರ ವತಿಯಿಂದ ನಗರ ಹೊರವಲಯದ ಜಪ್ಪಿನಮೊಗರುವಿನ ಮಹಾತ್ಮಾಗಾಂಧಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೇದಿಕೆಯಲ್ಲಿ ರವಿವಾರ ನಡೆದ ಪೌರತ್ವ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರದ ಫಾರೆನ್ಸಿಕ್ ವರದಿಯಲ್ಲಿ ಬೆಂಕಿಯು ರೈಲಿನ ಒಳಗಿನಿಂದ ಬಂದಿದೆ ಎಂದಿದ್ದರೂ ಕೂಡ ಮೃತದೇಹ ಕುಟುಂಬಸ್ಥರಿಗೆ ನೀಡದೆ ಮೆರವಣಿಗೆ ಮಾಡಿ ಗಲಭೆ ಎಬ್ಬಿಸಿ ಎರಡೂವರೆ ಸಾವಿರ ಮುಸ್ಲಿಮರನ್ನು ಕೊಲ್ಲಲಾಯಿತು. ಅಂದು ಗಲಭೆ ಹತ್ತಿಕ್ಕಲು ಮುಂದಾದ ಪೊಲೀಸರನ್ನು ಮೋದಿ ತಡೆದಿದ್ದರು. ಆ ದುರ್ಘಟನೆಯಲ್ಲಿ ತನ್ನ ಪಾತ್ರವಿಲ್ಲ ಎಂದಿದ್ದ ಮೋದಿಯ ಅಸಲಿ ಮುಖ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಗಲಭೆಯ ಮೂಲಕ ಹೊರಬಿದ್ದಿದೆ ಎಂದು ಸ್ವಾಮಿ ಅಗ್ನಿವೇಶ್ ಹೇಳಿದರು.

ಅಮೂಲ್ಯ ಲಿಯೋನ್ ಸಹಿತ ಬೀದರ್‌ನ ಶಿಕ್ಷಣ ಸಂಸ್ಥೆಯ ವಿರುದ್ಧ ದೇಶದ್ರೋಹದ ಕೇಸು ಹಾಕುವುದಾದರೆ ಗೋಡ್ಸೆ ದೇಶಭಕ್ತ ಎಂದ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧವೂ ಕಠಿಣ ಪ್ರಕರಣ ದಾಖಲಿಸಬೇಕಿತ್ತು. ಸಚಿವ ಅನುರಾಗ್ ಠಾಕೂರ್ ವಿರುದ್ಧವೂ ಪ್ರಕರಣ ದಾಖಲಿಸಬೇಕಿತ್ತು. ಆದರೆ ಅವರ ವಿರುದ್ಧ ಕ್ರಮ ಜರುಗಿಸಲು ಮುಂದಾದ ನ್ಯಾಯಾಧೀಶರನ್ನು ರಾತ್ರೋ ರಾತ್ರಿ ವರ್ಗಾಯಿಸಲಾಗಿದೆ ಎಂದ ಸ್ವಾಮಿ ಅಗ್ನಿವೇಶ್, ಗೋಡ್ಸೆ ಸಂತತಿಗಳು ಏನೇ ಮಾಡಿದರೂ ಕೂಡ ಭಾರತವು ಎಂದಿಗೂ ಹಿಂದುತ್ವ ರಾಷ್ಟ್ರ ಆಗದು ಎಂದು ಪುನರುಚ್ಛರಿಸಿದರು.

ದೇಶದ ನಾಗರಿಕರಲ್ಲಿ ಪೌರತ್ವದ ದಾಖಲೆ ಕೇಳುವ ಮೋದಿ, ಮೊದಲು ತನ್ನ ಪದವಿಯ ಪ್ರಮಾಣಪತ್ರ ತೋರಿಸಲಿ ಎಂದ ಅಗ್ನಿವೇಶ್ ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದ ಮೋದಿಯು ಒಂದು ತಲಾಖನ್ನೂ ಕೂಡ ಹೇಳಿಲ್ಲ ಎಂದು ವ್ಯಂಗ್ಯವಾಡಿದರು.

ಪುಲ್ವಾಮ ಘಟನೆ ವರದಿ ಎಲ್ಲಿ ?: ಪುಲ್ವಾಮದಲ್ಲಿ ದೇಶದ ಸೈನಿಕರ ಹತ್ಯೆ ನಡೆದು ವರ್ಷವೇ ಕಳೆದರೂ ಕೂಡ ಅದರ ವರದಿಯನ್ನು ಕೇಂದ್ರ ಸರಕಾರ ಯಾಕೆ ಬಿಡುಗಡೆ ಮಾಡುತ್ತಿಲ್ಲ ? ನಮ್ಮ ಸೈನಿಕರನ್ನು ಕೊಂದದ್ದು ಯಾರು ಎಂದು ಹೇಳಲಿ. ಕೇವಲ ಸುಳ್ಳುಗಳನ್ನು ಹೇಳಿ ಚುನಾವಣೆ ಗೆಲ್ಲುವುದು ಮುಖ್ಯವಲ್ಲ ಎಂದು ಸ್ವಾಮಿ ಅಗ್ನಿವೇಶ್ ನುಡಿದರು.

ಎಷ್ಟು ಜನರನ್ನು ಕೊಲ್ಲುವಿರಿ ?: ರಮೇಶ್ ಕುಮಾರ್ ಪ್ರಶ್ನೆ

ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವ ಅವಕಾಶವನ್ನು ಸಂವಿಧಾನ ಯಾರಿಗೂ ಕೊಟ್ಟಿಲ್ಲ, ಕೊಡುವುದೂ ಇಲ್ಲ. ಬಿಜೆಪಿಗೆ ಬಹುಮತವಿದ್ದ ಮಾತ್ರಕ್ಕೆ ಸಂವಿಧಾನ ವಿರೋಧಿ ನಿರ್ಣಯ ಕೈಗೊಳ್ಳುವ ಅಧಿಕಾರವಿಲ್ಲ. ಬಿಜೆಪಿಗರು ಸಿಎಎ, ಎನ್‌ಆರ್‌ಸಿ ಜಾರಿಗೆ ಯತ್ನಿಸುತ್ತಿದ್ದರೆ ನಾವು ಅದಕ್ಕೆ ಎದೆಯೊಡ್ಡಿ ನಿಂತಿದ್ದೇವೆ. ಕೊಂದರೆ ಎಷ್ಟು ಜನರನ್ನು ನೀವು ಕೊಲ್ಲಬಲ್ಲಿರಿ ಎಂದು ವಿಧಾನ ಸಭೆಯ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಪ್ರಶ್ನಿಸಿದರು.

ಬಹುಮತವಿರುವ ಸರಕಾರ ಎಲ್ಲವನ್ನೂ ಬುಡಮೇಲು ಮಾಡಲು ಸಾಧ್ಯವಾಗದು. ಹಾಗಾಗಿ ಯಾರೂ ಅಂಜಬೇಕಿಲ್ಲ, ನಮಗೆ ಸೋಲಿಲ್ಲ ಎಂದ, ರಮೇಶ್ 1943ರಲ್ಲಿ ಮಹಾತ್ಮಾ ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡಿದಾಗ ಬ್ರಿಟಿಷರು ಅವರನ್ನು ನಿಂದಿಸಿದರು. ಈಗ ಬಿಜೆಪಿಗರು ಗಾಂಧೀಜಿಯನ್ನು ನಿಂದಿಸುತ್ತಿದ್ದಾರೆ. ಗಾಂಧೀಜಿ ಕುರಿತು ಅವಹೇಳನ ಮಾಡಿದ ಬಿಜೆಪಿ ನಾಯಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆಯಾ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಬಿಎಂ ಫಾರೂಕ್, ನಸೀರ್ ಅಹ್ಮದ್, ಸೈಯದ್ ಮದನಿ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಲ್‌ಹಾಜ್ ಉಸ್ಮಾನ್ ಫೈಝಿ ತೋಡಾರ್, ಎಸ್‌ಕೆಎಸ್‌ಎಂ ಸಂಘಟನೆಯ ಮುಖಂಡ ಎಂಜಿ ಮುಹಮ್ಮದ್, ಸಿಪಿಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್ ಮತ್ತಿತರರು ಮಾತನಾಡಿದರು.

ವೇದಿಕೆಯಲ್ಲಿ ಉಳ್ಳಾಲ ಸೈಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುರ್ರಶೀದ್ ಉಳ್ಳಾಲ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಹಾಜಿ ಬಿಎಂ ಮುಮ್ತಾಝ್ ಅಲಿ, ಮಾಜಿ ಶಾಸಕ ಮೊಯ್ದಿನ್ ಬಾವಾ, ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಎಸ್ಕೆಎಸೆಸ್ಸೆಫ್ ದ.ಕ.ಜಿಲ್ಲಾಧ್ಯಕ್ಷ ಸೈಯದ್ ಅಮೀರ್ ತಂಙಳ್, ಎಸ್ಸೆಸ್ಸೆಫ್ ಮುಖಂಡ ಯೂಸುಫ್ ಸಅದಿ ನಾವೂರು, ಡಬ್ಲ್ಯೂಪಿಐ ದ.ಕ.ಜಿಲ್ಲಾಧ್ಯಕ್ಷ ಮುತ್ತಲಿಬ್ ಎಸ್‌ಎಂ., ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ, ಜ.ಇ. ಹಿಂದ್ ದ.ಕ.ಜಿಲ್ಲಾಧ್ಯಕ್ಷ ಸಈದ್ ಇಸ್ಮಾಯೀಲ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ದ.ಕ.ಜಿಲ್ಲಾಧ್ಯಕ್ಷ ತಬೂಕ್ ದಾರಿಮಿ, ಸೈಯದ್ ಮದನಿ ದರ್ಗಾದ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹಾ, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ, ಮಾಜಿ ಮೇಯರ್ ಕೆ. ಅಶ್ರಫ್, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯುಎಚ್., ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಇಸ್ಮಾಯೀಲ್ ಫೈಝಿ, ಉದ್ಯಮಿ ಝಿಯಾವುದ್ದೀನ್, ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್, ಲತೀಫ್ ದಾರಿಮಿ ರೆಂಜಲಾಡಿ, ಸಿದ್ದೀಕ್ ತಲಪಾಡಿ, ನಾಸಿರ್ ಸಜಿಪ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿಯ ಅಧ್ಯಕ್ಷ ಯು.ಕೆ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಯುಕೆ ಮುಹಮ್ಮದ್ ಮುಸ್ತಫಾ ಸ್ವಾಗತಿಸಿದರು. ಸಮಿತಿಯ ಸಂಚಾಲಕ ನಝೀರ್ ಉಳ್ಳಾಲ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಯುಎಚ್ ಫಾರೂಕ್ ಠರಾವು ಮಂಡಿಸಿದರು. ಪಿಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಎಕೆ ಅಶ್ರಫ್ ಜೋಕಟ್ಟೆ ಮತ್ತು ಸಲಾಂ ಮದನಿ ಅಳಕೆ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖರ ಮಾತುಗಳು

ಹಿಂದೆ ಇಂಗ್ಲಿಷರು ಮಹಾತ್ಮಾ ಗಾಂಧಿಯವರ ವಿರುದ್ಧ ಆಡಿದ್ದ ಮಾತುಗಳನ್ನು ಇಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆ ಇಂಗ್ಲಿಷರು ಮತ್ತು ಈ ಬಿಜೆಪಿಯವರ ಮಧ್ಯೆ ಯಾವ ವ್ಯತ್ಯಾಸವೂ ಇಲ್ಲ. ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದ ನಾನು ಪುಣ್ಯ ಮಾಡಿರಬೇಕು. ಯಾಕೆಂದರೆ ನನ್ನ ಅಜ್ಜನವರೆಗಿನ ದಾಖಲೆಗಳು ಇವೆ. ಆದರೆ ಮಂಗಳೂರಿನ ಬಿಲ್ಲವರು, ಮೊಗವೀರರಲ್ಲಿ ದಾಖಲೆಗಳು ಎಲ್ಲಿರುತ್ತದೆ ? ಎನ್‌ಪಿಆರ್ ವಿರುದ್ಧ ಹೋರಾಡುವುದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ಕಾಯ್ದೆಯ ವಿರುದ್ಧ ದೇಶಾದ್ಯಂತ ನಡೆಯುವ ಹೋರಾಟ-ಪ್ರತಿಭಟನೆಗೆ ಕೈ ಜೋಡಿಸದೇ ಇದ್ದರೆ ಮತ್ತು ಕಾಯ್ದೆಯ ಪರವಾಗಿ ಇದ್ದರೆ ಅವರಂತಹ ದೇಶದ್ರೋಹಿಗಳು ಬೇರೆ ಯಾರೂ ಇಲ್ಲ.
-ರಮೇಶ್ ಕುಮಾರ್, ಮಾಜಿ ಅಧ್ಯಕ್ಷರು, ರಾಜ್ಯ ವಿಧಾನ ಸಭೆ

ಈವರೆಗೆ ನಾವು ಎಲ್ಲರೂ ಸ್ನೇಹಿತರಂತೆ ಪರಸ್ಪರ ಅರಿತು ಬದುಕುತ್ತಿದ್ದೆವು. ಇದೀಗ ಸಂವಿಧಾನದ ಅಶಯಕ್ಕೆ ವಿರುದ್ಧವಾಗಿ ಮುಸ್ಲಿಮರನ್ನು ದೇಶದಿಂದ ಪ್ರತ್ಯೇಕಿಸಲು ಕೇಂದ್ರ ಸರಕಾರ ಮುಂದಾಗಿದೆ. ನಮ್ಮ ಹೋರಾಟ ನಿಲ್ಲದು. ನ್ಯಾಯ ಸಿಗುವವರೆಗೂ ಅಹಿಂಸಾ ಮಾರ್ಗದಲ್ಲಿ ಹೋರಾಡುವೆವು. ನಾವು ಯಾವತ್ತೂ ಈ ಭಾರತವನ್ನು ಬಿಟ್ಟು ಹೋಗಲಾರೆವು. ನಮ್ಮನ್ನು ಜೈಲಿಗೆ ಹಾಕಿದರೂ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಿದ್ದೇವೆ,
- ಅಲ್‌ಹಾಜ್ ಪಿಎಂ ಇಬ್ರಾಹೀಂ ಮುಸ್ಲಿಯಾರ್ ಬೇಕಲ, ಸಂಯುಕ್ತ ಖಾಝಿ ಉಡುಪಿ

ನಮಗೆ ಸ್ವಾಮಿ ಅಗ್ನಿವೇಶ್‌ರ ಖಾದಿ ಆದರ್ಶವಾಗಬೇಕೇ ವಿನಃ ಆದಿತ್ಯ ನಾಥ್‌ರ ಖಾದಿಯಲ್ಲ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಮುಸ್ಲಿಮರ ಪ್ರಶ್ನೆಯಲ್ಲ. ಇದು ಭಾರತೀಯರ ಪ್ರಶ್ನೆಯಾಗಿದೆ. ಹಾಗಾಗಿ ಇದರ ವಿರುದ್ಧ ಎಲ್ಲರೂ ಜಾತಿ, ಧರ್ಮ ಮರೆತು ಹೋರಾಡಬೇಕಿದೆ.
-ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಅಧ್ಯಕ್ಷರು, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಯೂತ್ ವಿಂಗ್

ಜಗತ್ತಿನಲ್ಲಿ ಸತ್ಯಕ್ಕೆ ಜಯ ಸಿಕ್ಕಿದ ಇತಿಹಾಸವಿದೆಯೇ ವಿನಃ ಸೋತ ಇತಿಹಾಸವಿಲ್ಲ. ಕೇಂದ್ರ ಸರಕಾರವು ರೂಪಿಸಿರುವ ಈ ಕರಾಳ ಕಾಯ್ದೆಯ ವಿರುದ್ಧ ದೇಶಾದ್ಯಂತ ನಡೆಯುವ ಹೋರಾಟ, ಆಕ್ರೋಶ, ಪ್ರತಿಭಟನೆಗೆ ಖಂಡಿತಾ ಜಯ ಸಿಗಲಿದೆ.
- ಎಪಿ ಅಬ್ದುಲ್ ಹಕೀಂ ಅಝ್‌ಹರಿ ಕಾಂತಾಪುರಂ, ನಿರ್ದೇಶಕರು, ಮರ್ಕಝುಸ್ಸಖಾಫತು ಸುನ್ನಿಯ್ಯಿ, ಮಲಪ್ಪುರಂ

ನಾವು ದೇಶದ ಮೂಲ ನಿವಾಸಿಗಳು. ಕೇಂದ್ರ ಸರಕಾರವು ಈ ಕರಾಳ ಕಾಯ್ದೆಯ ಮೂಲಕ ನಮ್ಮಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಇದನ್ನು ಹಿಮ್ಮೆಟ್ಟಿಸಲು ಹಿಂದೂ, ಮುಸ್ಲಿಮರ ಸಹಿತ ಅಹಿಂದ ವರ್ಗವು ಏಕತೆಯ ಧ್ವನಿ ಮೊಳಗಿಸಬೇಕು.
-ಸೀತಾರಾಮ್ ಕೊಹಿವಾಲ್, ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ

ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶದಲ್ಲಿ 2014 ಡಿಸೆಂಬರ್ 31ಕ್ಕಿಂತ ಮುಂಚೆ ಧಾರ್ಮಿಕ ದೌರ್ಜನ್ಯಕ್ಕೀಡಾದ ಹಿಂದೂಗಳಿಗೆ ಪೌರತ್ವ ನೀಡುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ತುಂಬಾ ಸಂತೋಷದ ವಿಚಾರ. ಅವರಿಗೆ ಪೌರತ್ವ ನೀಡಬೇಡಿ ಎಂದು ಯಾರೂ ಹೇಳುವುದಿಲ್ಲ. ಆದರೆ, ಆ ಬಳಿಕ ದೌರ್ಜನ್ಯಕ್ಕೀಡಾದವರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಅಂದರೆ ಕೇಂದ್ರ ಸರಕಾರ ಈ ಕಾಯ್ದೆಯ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ.
- ತಾಹಿರ್ ಹುಸೈನ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರು

ಕರಾಳ ಕಾಯ್ದೆಯು ಜಾರಿಗೊಳ್ಳುವ ಹೊಸ್ತಿಲಲ್ಲಿದೆ. ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಗುರುತು ಪರಿಚಯ ಇರುವ ಶಿಕ್ಷಕರೋ, ಸರಕಾರಿ ನೌಕರರೋ ಮನೆಬಾಗಿಲಿಗೆ ಬಂದು ಮಾಹಿತಿ ಕೇಳಬಹುದು. ಆದರೆ, ಯಾವ ಕಾರಣಕ್ಕೂ ದಾಖಲೆಗಳನ್ನು ನೀಡಬಾರದು. ಎಲ್ಲರೂ ಅದನ್ನು ಒಮ್ಮತದಿಂದ ಬಹಿಷ್ಕರಿಸಬೇಕು.
- ಯಾಸಿರ್ ಹಸನ್, ಪಿಎಫ್‌ಐ ರಾಜ್ಯಾಧ್ಯಕ್ಷರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X