ಯೆಸ್ ಬ್ಯಾಂಕ್ ಬಿಕ್ಕಟ್ಟು: ಸ್ಥಾಪಕ ರಾಣಾ ಕಪೂರ್ ಈ.ಡಿ. ಕಸ್ಟಡಿಗೆ

ಮುಂಬೈ, ಮಾ. 8: ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್‌ನ ಸ್ಥಾಪಕ ರಾಣಾ ಕಪೂರ್‌ನನ್ನು ಮುಂಬೈಯ ವಿಶೇಷ ನ್ಯಾಯಾಲಯ ಮಾರ್ಚ್ 11ರ ವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ. .
ದೀವಾನ್ ಹೌಸಿಂಗ್ ಫಿನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್)ಗೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ರವಿವಾರ ಮುಂಜಾನೆ 3 ಗಂಟೆಗೆ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್‌ನನ್ನು ದಕ್ಷಿಣ ಮುಂಬೈಯ ಬಲ್ಲಾರ್ಡ್ ಪಿಯರ್‌ನಲ್ಲಿರುವ ತನ್ನ ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿತ್ತು. ಆರ್‌ಬಿಐ ಯೆಸ್ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದ ಹಾಗೂ ಎಪ್ರಿಲ್ 3ರ ವರೆಗೆ ಖಾತೆಯಿಂದ ಹಣ ತೆಗೆಯುವುದನ್ನು 50 ಸಾವಿರ ಮಿತಿಗೆ ಒಳಪಡಿಸಿದ ಬಳಿಕ ಜಾರಿ ನಿರ್ದೇಶನಾಲಯ ಶುಕ್ರವಾರ ರಾತ್ರಿ ರಾಣಾ ಕಪೂರ್ ಮನೆ ಮೇಲೆ ದಾಳಿ ನಡೆಸಿತ್ತು.
Next Story





