ರಾಣಾ ಕಪೂರ್‌ನ 12 ಬೇನಾಮಿ ಕಂಪೆನಿ, 44 ಕಲಾಕೃತಿ, 2,000 ಕೋ. ರೂ. ಹೂಡಿಕೆ ಕೇಂದ್ರೀಕರಿಸಿ ತನಿಖೆ

ಹೊಸದಿಲ್ಲಿ, ಮಾ. 8: ಹನ್ನೆರೆಡಕ್ಕೂ ಅಧಿಕ ಬೇನಾಮಿ ಕಂಪೆನಿಗಳು, 44 ದುಬಾರಿ ಪೈಂಟಿಂಗ್‌ಗಳು ಹಾಗೂ ರಾಣಾ ಕಪೂರ್‌ಗೆ ಸೇರಿದ 2 ಸಾವಿರ ಕೋ. ರೂ. ಜಾರಿ ನಿರ್ದೇಶನಾಲಯದ ಪರಿಶೀಲನೆಯಲ್ಲಿದೆ.
ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್‌ನನ್ನು ಜಾರಿ ನಿರ್ದೇಶನಾಲಯ ಫೋರ್ಟ್ ಮುಂಬೈ ಸಂತ ಜಾರ್ಜ್ ಆಸ್ಪತ್ರೆಯಿಂದ ವಶಕ್ಕೆ ತೆಗೆದುಕೊಂಡಿತ್ತು. ಅನಂತರ ರವಿವಾರ ಮುಂಬೈ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಹಣ ಅಕ್ರಮ ವರ್ಗಾವಣೆ ಆರೋಪದಲ್ಲಿ ರವಿವಾರ ಜಾರಿ ನಿರ್ದೇಶನಾಲಯದಿಂದ ಬಂಧಿತನಾಗಿರುವ ರಾಣಾ ಕಪೂರ್ ವಿರುದ್ಧ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆ 2 ಸಾವಿರ ಕೋ. ರೂ. ಹೂಡಿಕೆಗಳು, 44 ದುಬಾರಿ ಪೈಂಟಿಂಗ್‌ಗಳು ಹಾಗೂ 12ಕ್ಕೂ ಅಧಿಕ ಬೇನಾಮಿ ಕಂಪೆನಿಗಳನ್ನು ಕೇಂದ್ರೀಕರಿಸಿದೆ.
ಲಂಡನ್‌ನಲ್ಲಿ ಕಪೂರ್ ಕುಟುಂಬಕ್ಕೆ ಕೆಲವು ಸೊತ್ತುಗಳು ಇರುವ ಬಗ್ಗೆ ದಾಳಿ ವೇಳೆ ಪತ್ತೆಯಾದ ದಾಖಲೆಗಳು ಹೇಳುತ್ತಿವೆ. ಅಲ್ಲದೆ, ಅವರ ಸ್ವಾಧೀನದಲ್ಲಿರುವ ಹಣದ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ರಾಣಾ ಕಪೂರ್ ವಿರುದ್ಧ ಪ್ರಕರಣ ದಾಖಲು ಕ್ರಿಮಿನಲ್ ಸಂಚು, ವಂಚನೆ ಹಾಗೂ ಭ್ರಷ್ಟಾಚಾರದ ಆರೋಪದಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್, ಡಿಎಚ್‌ಎಫ್‌ಎಲ್ ಹಾಗೂ ಡುಇಟ್ ಅರ್ಬನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ (ಭಾರತ) ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.







