ಉಡುಪಿ: ಮೂವರಿಗೆ ಮುಖ್ಯಮಂತ್ರಿ ಚಿನ್ನದ ಪದಕ ಗೌರವ

ಮಂಜುನಾಥ್, ಗೋಪಿಕೃಷ್ಣ, ಸಂತೋಷ್
ಉಡುಪಿ, ಮಾ.8: 2018ನೆ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಉಡುಪಿ ನಗರ ವೃತ್ತ ನಿರೀಕ್ಷಕ ಮಂಜುನಾಥ್, ಕುಂದಾಪುರ ವೃತ್ತ ನಿರೀಕ್ಷಕ ಕೆ.ಆರ್.ಗೋಪಿಕೃಷ್ಣ ಹಾಗೂ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ಕಾನ್ಸ್ಟೇಬಲ್ ಸಂತೋಷ್ ಜೆ. ಆಯ್ಕೆ ಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಶಂಕರಹಳ್ಳಿಯ ಮಂಜು ನಾಥ್, 1998ರಲ್ಲಿ ಪೊಲೀಸ್ ಸೇವೆಗೆ ಎಸ್ಸೈಯಾಗಿ ಸೇರ್ಪಡೆಗೊಂಡ ಇವರು, ಮೈಸೂರು, ವಿರಾಜಪೇಟೆ, ಶನಿವಾರ ಸಂತೆ, ಕುಟ್ಟ, ಸಕಲೇಶಪುರ, ಶಿವಮೊಗ್ಗ ನಗರ, ಸುರತ್ಕಲ್ ಟ್ರಾಫಿಕ್ನಲ್ಲಿ ಕರ್ತವ್ಯ ಸಲ್ಲಿಸಿದ್ದರು. 2018ರ ಅಕ್ಟೋಬರ್ ನಿಂದ ಇವರು ಉಡುಪಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರು 2012ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಭಡ್ತಿ ಪಡೆದರು. ಇವರು ಸುಮಾರು 300 ಶಾಲೆಗಳಿಗೆ ತೆರಳಿ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಾನೂನು, ಟ್ರಾಫಿಕ್ ಅರಿವು, ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿ ಸುವ ಕಾರ್ಯ ಮಾಡಿದ್ದಾರೆ. ಅದೇ ರೀತಿ ಕೊಲೆ, ಕಳವು ಪ್ರಕರಣಗಳನ್ನು ಕ್ಷಿಪ್ರ ಕಾರ್ಯಾ ಚರಣೆಯ ಮೂಲಕ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಆರ್.ಗೋಪಿಕೃಷ್ಣ: ಮೂಲತಃ ಕುಂದಾಪುರ ತಾಲೂಕಿನ ಕೋಣಿಯ, ಪ್ರಸ್ತುತ ತುಮಕೂರು ನಿವಾಸಿಯಾಗಿರುವ ಇವರು, 1999ರಲ್ಲಿ ಪೊಲೀಸ್ ಸೇವೆಗೆ ಎಸ್ಸೈ ಆಗಿ ಸೇರ್ಪಡೆಗೊಂಡಿದ್ದರು. 2004ರಲ್ಲಿ ವೀರಪ್ಪನ್ ವಿರುದ್ದದ ಎಸ್.ಟಿ.ಎಫ್. ಕಾರ್ಯಪಡೆಯಲಿ್ಲ ಇವರು ಕರ್ತವ್ಯ ನಿರ್ವಹಿಸಿದ್ದರು.
ಅದೇ ರೀತಿ ಟಿ.ನರಸೀಪುರ, ಬನ್ನೂರು, ಹಾಸನ, ಬನವಾಸಿ, ಪಿರಿಯ ಪಟ್ಟಣ, ಮದ್ದೂರು, ಚಾಮರಾಜನಗರ ಲೋಕಾಯುಕ್ತ, ಉಳ್ಳಾಲಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಇವರು, ಎರಡು ತಿಂಗಳ ಹಿಂದೆ ಕುಂದಾಪುರ ವೃತ್ತ ನಿರೀಕ್ಷಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು 2012ರಲ್ಲಿ ಪೊಲೀಸ್ ನಿರೀಕ್ಷಕರಾಗಿ ಭಡ್ತಿ ಹೊಂದಿದ್ದಾರೆ.
ಸಂತೋಷ್ ಜೆ.: ಇವರು ಕಳೆದ 21 ವರ್ಷಗಳಿಂದ ಪೊಲೀಸ್ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 9 ವರ್ಷಗಳಿಂದ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಕ್ಸಲ್ ನಿಗ್ರಹ ಪಡೆಯ ಕಾರ್ಕಳ, ಆಗುಂಬೆ, ಅಮಾಸೆಬೈಲಿನಲ್ಲಿ ನಾಲ್ಕು ವರ್ಷಗಳ ಕಾಲ ಇವರು ಕರ್ತವ್ಯ ನಿರ್ವಹಿಸಿದ್ದರು.







