ಕುಂದಾಪುರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮೃತ್ಯು

ಕುಂದಾಪುರ, ಮಾ.8: ಬೆಂಗಳೂರಿನಿಂದ ಊರಿಗೆ ಪ್ರಯಾಣಿಸುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಬಸ್ಸಿನಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟ ಘಟನೆ ಶನಿವಾರ ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬಳ್ಕೂರು ಗ್ರಾಮದ ದೇವಸ್ಥಾನಬೆಟ್ಟು ನಿವಾಸಿ ಎಚ್.ಎಸ್. ಶ್ರೀಧರ ಮೂರ್ತಿ ಎಂಬವರ ಮಗ ಸುಹಾಸ್ ಎಸ್.(22) ಎಂದು ಗುರುತಿಸ ಲಾಗಿದೆ.
ಇವರು ಬೆಂಗಳೂರಿನಲ್ಲಿ ಕೊನೆಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಶನಿವಾರ ರಾತ್ರಿ 9:45ರ ಸುಮಾರಿಗೆ ಊರಿಗೆ ಬರಲು ಬಸ್ಸಿನಲ್ಲಿ ಹೊರಟಿದ್ದರು.
ಪ್ರಯಾಣದ ಮಧ್ಯೆ ಇವರು ಹೃದಯಾಘಾತ ಅಥವಾ ಇತರ ಕಾಯಿಲೆಯಿಂದ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 7:30ಕ್ಕೆ ಇವರು ಬಸ್ಸಿನಿಂದ ಇಳಿಯದಿರುವುದನ್ನು ಕಂಡ ನಿವಾರ್ಹಕ ಪರೀಕ್ಷಿಸಿದ ಮೃತಪಟ್ಟಿರುವುದು ತಿಳಿದುಬಂತು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





