ಸ್ಪೋಟಕ ಬಳಕೆಯಿಂದ ಮನೆಗಳಿಗೆ ಹಾನಿ: ದೂರು
ಕೋಟ, ಮಾ.8: ವಾರಾಹಿ ನೀರಾವರಿ ಯೋಜನೆಯ ಕಾಮಗಾರಿಗೆ ಸಂಬಂಧಿಸಿ ಬಿಲ್ಲಾಡಿ ಗ್ರಾಮದ ನೈಲಾಡಿ ಎಂಬಲ್ಲಿ ಸ್ಪೋಟಕ ಬಳಸಿ ಬಂಡೆ ಗಳನ್ನು ಸಿಡಿಸಿದ ಪರಿಣಾಮ ಸಮೀಪದ ಮನೆಗಳಿಗೆ ಹಾನಿಯಾಗಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗರಾಜ ಶೆಟ್ಟಿ ಎಂಬವರ ಮನೆಯ ಸಮೀಪ ವಾರಾಹಿ ನೀರಾವರಿ ಯೋಜನೆಯ ಕಾಮಗಾರಿ ಗುತ್ತಿಗೆದಾರರಾದ ಪ್ರವೀಣ್ ಕುಮಾರ್ ಮತ್ತು ಆತನ ಕೆಲಸದವರು ಮಾ.7ರಂದು ಸಂಜೆ 6-30ರ ಸುಮಾರಿಗೆ ಕಾನೂನು ಬಾಹಿರವಾಗಿ ಸ್ಪೋಟಕ ಬಳಸಿ, ಬಂಡೆಗಳನ್ನು ಸಿಡಿಸಿದ್ದಾರೆಂದು ದೂರಲಾಗಿದೆ.
ಇದರಿಂದ ನಾಗರಾಜ ಶೆಟ್ಟಿ ಮತ್ತು ಅವರ ಕುಟುಂಬದವರ ಖಾಸಗೀ ಸೊತ್ತಿಗೆ ಹಾನಿಯಾಗಿದೆ. ಅಲ್ಲದೆ ಪಂಜುರ್ಲಿ ದೇವಸ್ಥಾನ ಹಾಗೂ ಸ್ವಾಮಿ ಮನೆಯೂ ಸಹ ಹಾನಿಗೆ ಒಳಗಾಗಿದೆ. ಪ್ರವೀಣ್ ಕುಮಾರ್ ಕಾನೂನು ಬಾಹಿರವಾಗಿ ಸ್ಪೋಟ ಮಾಡಿ ಹೊತ್ತಿಲ್ಲದ ಹೊತ್ತಲ್ಲಿ ಸ್ಪೋಟಕ ಬಳಸಿ, ಮಾನಸಿಕ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story





