ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ವತಿಯಿಂದ ‘ನಾರಿ ಶಕ್ತಿ 2020’ ಪ್ರಶಸ್ತಿ ಪ್ರದಾನ

ಮಂಗಳೂರು : ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕಿಯರಿಗೆ ಸುಲ್ತಾನ್ ‘ನಾರಿ ಶಕ್ತಿ 2020’ ಪ್ರಶಸ್ತಿಯನ್ನು ಸೋಮವಾರ ನಗರದ ಕಂಕನಾಡಿ ಬೈಪಾಸ್ ರಸ್ತೆಯ ಶೋರೂಮ್‌ನಲ್ಲಿ ಪ್ರದಾನ ಮಾಡಲಾಯಿತು.
ಸಾಧಕಿಯರಾದ ಹಸೀನಾ ನೌಫಾಲ್ ಯೆನೆಪೊಯ, ಡಾ. ಕವಿತಾ ಡಿಸೋಜ, ಡಾ. ಶಮೀಮಾ ಹಫೀಝ್ ಅವರ ಪರವಾಗಿ ತಸ್ನೀಮಾ, ಪೂರ್ಣಿಮಾ ಶೆಣೈ, ಶೋಬಿತಾ ಸುಜಯ್ ಅತ್ತರ್ ಅವರಿಗೆ ಸುಲ್ತಾನ್ ‘ನಾರಿ ಶಕ್ತಿ 2020’ ಪ್ರಶಸ್ತಿ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಳೆದ ವರ್ಷದ ‘ನಾರಿ ಶಕ್ತಿ’ ವಿಜೇತರಾದ ಕೈರುನ್ನಿಸಾ ಸೈಯರ್ ಮತ್ತು ಎಲಿಜೆಬೆತ್ ನಿಲಿಯಾರ ಅವರು ಸಾಧಕಿಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಧಕಿಯರು ಸ್ವಸಂತೋಷಕ್ಕಾಗಿ ನಾವು ನಮ್ಮದೇ ಆದ ಕ್ಷೇತ್ರದಲ್ಲಿ ಸಮಾಜಕ್ಕೆ ಉಪಕಾರ ಆಗುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಮ್ಮ ಈ ಸೇವೆಯನ್ನು ಗುರುತಿಸಿದ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ಸಂಸ್ಥೆಗೆ ಅಭಾರಿ ಯಾಗಿರುವೆವು. ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ ಎಂದರು.
ಕಾರ್ಯಕ್ರಮದಲ್ಲಿ ‘ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್’ ಸಂಸ್ಥೆಯ ತಹ್‌ಸೀಮ್ ಮತ್ತು ಮೆಹರುನ್ನಿಸಾ ಪಾಲ್ಗೊಂಡಿದ್ದರು. ಸಂಸ್ಥೆಯ ಕಾರ್ಪೊರೇಟ್ ಮಾರ್ಕೆಟಿಂಗ್ ಮ್ಯಾನೇಜರ್ ಆಸೀಫ್ ಇಕ್ಬಾಲ್ ಕಾರ್ಯಕ್ರಮ ನಿರೂಪಿಸಿದರು.
ಮೋಚಿ ಸನ್‌ಗ್ಲಾಸ್ ಬಿಡುಗಡೆ: ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರು ಮತ್ತು ಮುಖ್ಯ ಅತಿಥಿಗಳು ಜೊತೆಗೂಡಿ ‘ಮೋಚಿ ಸನ್‌ಗ್ಲಾಸ್’ ಬಿಡುಗಡೆಗೊಳಿಸಿದರು.





















