ಅಲೋಶಿಯಸ್ ಕಾಲೇಜಿನಲ್ಲಿ 'ಸತ್ಯನಾಪುರದ ಸಿರಿ' ನಾಟಕ ಪ್ರದರ್ಶನ

ಮಂಗಳೂರು, ಮಾ.9: ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಮಂಗಳೂರು ಇದರ ಆಯೋಜನೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಮೋಘ (ರಿ) ಹಿರಿಯಡಕ ಉಡುಪಿ ಅಭಿನಯದ 'ಸತ್ಯನಾಪುರದ ಸಿರಿ' ಏಕವ್ಯಕ್ತಿ ಅಭಿನಯ ನಾಟಕ ಕಾಲೇಜಿನ ಎಲ್. ಸಿ. ಐ. ಆರ್ ಹಾಲ್ ನಲ್ಲಿ ಮಾ.10ರಂದು ಸಂಜೆ 6:45 ಕ್ಕೆ ನಡೆಯಲಿದೆ.
ಎನ್. ವಿ. ರಾವ್ ಕಾದಂಬರಿ ಆಧಾರಿತ ಈ ಏಕವ್ಯಕ್ತಿ ರಂಗ ಪ್ರಸ್ತುತಿಯನ್ನು ಕೃಷ್ಣಮೂರ್ತಿ ಕವತ್ತಾರು ನಿರ್ದೇಶಿಸಿದ್ದು ಪೂರ್ಣಿಮ ಸುರೇಶ್ ನಟಿಸಿದ್ದಾರೆ. ಮಧ್ಯಾಹ್ನ 2ಗಂಟೆಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರದರ್ಶನವಿದೆ ಎಂದು ಪ್ರಕಟನೆ ತಿಳಿಸಿದೆ.
Next Story





